ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡಿದ್ದಾರೆ.
ಸಂಸತ್ತಿನಲ್ಲಿ ನಡೆದ ಅವಿಶ್ವಾಸ ನಿರ್ಣಯದ ಹೈಡ್ರಾಮಾ ಬಳಿಕ ಮತದಾನ ನಡೆದಿದ್ದು, ಪ್ರಧಾನಮಂತ್ರಿ ಇಮ್ರಾನ್ ಖಾನ್ ಅಧಿಕಾರ ಅಂತ್ಯವಾಗಿದೆ. ಅವರು ಬಹುಮತ ತೋರುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡಿದ್ದಾರೆ.
ಅವಿಶ್ವಾಸ ತಪ್ಪಿಸಲು ಸತತ ಪ್ರಯತ್ನ ನಡೆಸಿದ್ದು, ತಡರಾತ್ರಿ 1.30 ಕ್ಕೆ ಅವಿಶ್ವಾಸಕ್ಕೆ ಗೆಲುವಾಗಿದೆ. 4 ವರ್ಷಗಳ ಬಳಿಕ ಇಮ್ರಾನ್ ಖಾನ್ ಅಧಿಕಾರಾದ ಅವಧಿ ಅಂತ್ಯವಾಗಿದೆ. ಈ ಮೂಲಕ ಅವಿಶ್ವಾಸದಲ್ಲಿ ಪದಚ್ಯುತರಾದ ದೇಶದ ಮೊದಲ ಪ್ರಧಾನಿ ಎನ್ನುವ ಕುಖ್ಯಾತಿಗೆ ಇಮ್ರಾನ್ ಖಾನ್ ಪಾತ್ರರಾಗಿದ್ದಾರೆ.