ಇಸ್ಲಾಮಾಬಾದ್: ಪಾಕಿಸ್ತಾನದ ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ ಸುಮಾರು ಒಂದು ತಿಂಗಳ ನಂತರ, ಇಂದು ನಿರ್ಣಾಯಕ ಮತದಾನ ನಡೆಯಬೇಕಿತ್ತು
ಆದರೆ, ನಿರ್ಣಯವನ್ನು ಸ್ಪೀಕರ್ ವಜಾಗೊಳಿಸಿದ್ದು, ಹೈಡ್ರಾಮಾವೇ ನಡೆದಿದೆ. ಚುನಾವಣೆಗೆ ಸಿದ್ಧರಾಗಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಇಮ್ರಾನ್ ಖಾನ್ ಕೆಳಗಿಳಿಸಿ ಹಂಗಾಮಿ ಸರ್ಕಾರ ರಚನೆಗೆ ಸಿದ್ಧತೆ ಆರಂಭವಾಗಿದೆ. ಆದರೆ, ಅಸೆಂಬ್ಲಿಯನ್ನು ವಿಸರ್ಜಿಸುವಂತೆ ನಾನು ಅಧ್ಯಕ್ಷರಿಗೆ ಸಲಹೆ ನೀಡುತ್ತೇನೆ, ಅವಿಶ್ವಾಸ ನಿರ್ಣಯದ ನಂತರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ನಾನು ಅಧ್ಯಕ್ಷರಿಗೆ ಸಲಹೆ ನೀಡಿದ್ದೇನೆ. ಅವಿಶ್ವಾಸ ನಿರ್ಣಯ ವಿದೇಶಿ ಷಡ್ಯಂತ್ರದ ಭಾಗವಾಗಿತ್ತು. ಅವಿಶ್ವಾಸ ಮತಕ್ಕೆ ಅವಕಾಶ ನೀಡದ ಡೆಪ್ಯುಟಿ ಸ್ಪೀಕರ್ ತೀರ್ಪಿನಿಂದ ರಾಷ್ಟ್ರವು ಸಂತಸಗೊಂಡಿದೆ ಎಂದಿದ್ದಾರೆ.
ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯ ಸ್ಥಗಿತಗೊಂಡಿದೆ, ಇಮ್ರಾನ್ ಖಾನ್ ಸದ್ಯಕ್ಕೆ ಪಾಕ್ ಪ್ರಧಾನಿಯಾಗಿ ಉಳಿದಿದ್ದಾರೆ. ಅವಿಶ್ವಾಸ ಮತವು ವಿದೇಶಿ ಪಿತೂರಿಯ ಭಾಗವಾಗಿದೆ ಎಂದು ಸ್ಪೀಕರ್ ತೀರ್ಪು ನೀಡಿದ ನಂತರ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವನ್ನು ಅಮಾನತುಗೊಳಿಸಲಾಗಿದೆ. ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸುತ್ತಿವೆ. ಪ್ರಧಾನಿ ಇಮ್ರಾನ್ ಖಾನ್ ಅವರು ಅಧ್ಯಕ್ಷ ಆರಿಫ್ ಅಲ್ವಿ ಅವರನ್ನು ಭೇಟಿ ಮಾಡಿ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.