ಇಸ್ಲಾಮಾಬಾದ್: ಅವಿಶ್ವಾಸ ನಿರ್ಣಯಕ್ಕೆ ಮುನ್ನ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ವಿದೇಶಿ ಶಕ್ತಿಗಳು ನಾಯಕತ್ವ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮತ್ತೊಮ್ಮೆ ಹೇಳಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ತಮ್ಮ ದೇಶವಾಸಿಗಳಿಗೆ ಅವಿಶ್ವಾಸ ನಿರ್ಣಯದ ವಿರುದ್ಧ ಬೀದಿಗಿಳಿಯುವಂತೆ ಕರೆ ನೀಡಿದ್ದಾರೆ.
ನಿಮ್ಮೆಲ್ಲರನ್ನೂ ಬೀದಿಗಿಳಿಯುವಂತೆ ನಾನು ಕರೆ ನೀಡುತ್ತೇನೆ. ನಿಮ್ಮ ಆತ್ಮಸಾಕ್ಷಿಗಾಗಿ, ಈ ರಾಷ್ಟ್ರದ ಹಿತಾಸಕ್ತಿಗಾಗಿ ನೀವು ಪ್ರತಿಭಟನೆ ಮಾಡಬೇಕು. ಯಾವುದೇ ಪಕ್ಷವು ನಿಮ್ಮನ್ನು ಹಾಗೆ ಮಾಡಲು ಒತ್ತಾಯಿಸಬಾರದು. ನೀವು ಭವಿಷ್ಯಕ್ಕಾಗಿ ಬೀದಿಗಿಳಿಯಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಕಳೆದ ವಾರ 342 ಸದಸ್ಯರ ಅಸೆಂಬ್ಲಿಯಲ್ಲಿ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವು ಬಹುಮತ ಕಳೆದುಕೊಂಡಿತು. ನಾಳೆಯ ಬಗ್ಗೆ ನನ್ನ ಬಳಿ ಪ್ಲಾನ್ ಇದೆ, ನೀವು ಚಿಂತಿಸಬೇಡಿ, ನಾನು ಅಸೆಂಬ್ಲಿಯಲ್ಲಿ ಬಹುಮತ ತೋರಿಸುತ್ತೇನೆ ಎಂದಿದ್ದಾರೆ.