![](https://kannadadunia.com/wp-content/uploads/2021/08/910848-untitled-2021-08-30t183632.942.jpg)
ಹಸಿರು ಸೊಪ್ಪುಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಪ್ರಯೋಜನವಿದೆ. ಹಸಿರು ಸೊಪ್ಪುಗಳು ರೋಗದಿಂದ ದೇಹವನ್ನು ರಕ್ಷಿಸುತ್ತವೆ. ಅನೇಕ ಜನರಿಗೆ ಹಸಿರು ಸೊಪ್ಪು ಇಷ್ಟವಾಗುವುದಿಲ್ಲ. ಬಾಯಿ ರುಚಿಗಿಂತ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ, ಪ್ರತಿಯೊಬ್ಬರೂ ಇದನ್ನು ಸೇವಿಸಬೇಕು.
ಹೆಚ್ಚಿನ ಜನರು ಸಾಸಿವೆ ಸೊಪ್ಪು, ಮೆಂತ್ಯ ಸೊಪ್ಪು ಮತ್ತು ಪಾಲಕವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಇತರ ಹಲವು ಬಗೆಯ ಸೊಪ್ಪುಗಳು ಲಭ್ಯವಿವೆ. ಅವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ನುಗ್ಗೆ ಕಾಯಿ ಸೊಪ್ಪು : ನುಗ್ಗೆ ಕಾಯಿ ಎಲೆಗಳು ಜೀವಸತ್ವ, ಪ್ರೋಟೀನ್ ಮತ್ತು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿವೆ. ಸಂಧಿವಾತ, ಮಧುಮೇಹ, ಹೃದಯ ಸಂಬಂಧಿ ರೋಗಗಳು, ಉಸಿರಾಟದ ಕಾಯಿಲೆಗಳು, ಚರ್ಮ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಇದು ರಾಮಬಾಣ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಿಂದ ಸಮೃದ್ಧವಾಗಿದೆ. ಇದರ ಸೇವನೆಯಿಂದ ಚರ್ಮ, ಮೂಳೆಗಳು ಮತ್ತು ಕೂದಲು ಆರೋಗ್ಯವಾಗಿರುತ್ತದೆ. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ರೋಗಗಳು ಕಡಿಮೆಯಾಗುತ್ತವೆ. ಮಧುಮೇಹ ಇರುವವರಿಗೆ ಪಾಲಕ್ ತಿನ್ನಲು ಸಲಹೆ ನೀಡಲಾಗುತ್ತದೆ.
ಮೆಂತ್ಯ ಸೊಪ್ಪು: ಮೆಂತ್ಯ ಸೊಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಅನೇಕ ರೋಗಗಳಿಗೆ ರಾಮಬಾಣ. ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ.