ನಿರ್ದಿಷ್ಟ ವರ್ಗದ ಮದ್ಯದ ಮೇಲಿನ ಅಬಕಾರಿ ಸುಂಕದಲ್ಲಿ 50%ನಷ್ಟು ಕಡಿತ ಮಾಡಿರುವ ಮಹಾರಾಷ್ಟ್ರ ಸರ್ಕಾರ, ಶ್ರೀಮಂತ ಕುಡುಕರಿಗೊಂದು ಸಿಹಿ ಸುದ್ದಿ ಕೊಟ್ಟಿದೆ.
ಆಮದು ಮಾಡಿಕೊಂಡ ಸ್ಕಾಚ್ ವಿಸ್ಕಿಗಳು ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಅಗ್ಗವಾಗಿ, ಮಿಕ್ಕ ರಾಜ್ಯಗಳಲ್ಲಿ ಇರುವಷ್ಟೇ ದರದಲ್ಲಿ ಸಿಗಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಆಮದು ಮಾಡಿಕೊಳ್ಳಲಾದ ಸ್ಕಾಚ್ ವಿಸ್ಕಿ ಮೇಲಿನ ಆಮದು ಸುಂಕವನ್ನು ಉತ್ಪಾದನಾ ವೆಚ್ಚದ 300 ಪ್ರತಿಶತದಿಂದ 150 ಪ್ರತಿಶತಕ್ಕೆ ಇಳಿಸಲಾಗಿದೆ,” ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯದ ಮಟ್ಟಿಗೆ ಆಮದು ಮಾಡಿಕೊಂಡ ಸ್ಕಾಚ್‌ನ ಮಾರಾಟದಿಂದ ಮಹಾರಾಷ್ಟ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 100 ಕೋಟಿ ರೂ.ಗಳ ಆದಾಯವಿದೆ. ಆದರೆ ಸದ್ಯ ಮಾರಾಟವಾಗುತ್ತಿರುವ ವಿದೇಶಿ ಸ್ಕಾಚ್ ವಿಸ್ಕಿಗಳ ಒಂದು ಲಕ್ಷ ಬಾಟಲಿಗಳಿಂದ 2.5 ಲಕ್ಷ ಬಾಟಲಿಗಳಿಗೆ ಮಾರಾಟವನ್ನು ಏರಿಸಿ, ಈ ಮೂಲಕ ಸಿಗುವ ಆದಾಯವನ್ನು 250 ಕೋಟಿ ರೂ.ಗಳಿಗೆ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಇದರೊಂದಿಗೆ ಅನ್ಯ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ವಿದೇಶಿ ಸ್ಕಾಚ್ ಕಳ್ಳಸಾಗಾಟ ಮಾಡುವುದರ ಮೇಲೂ ಕಡಿವಾಣು ಹಾಕುವುದು ಈ ನಡೆಯ ಹಿಂದಿನ ಉದ್ದೇಶವಾಗಿದೆ.