ನಿಮ್ಮಿಂದ ಸಾಲ ಪಡೆದ ವ್ಯಕ್ತಿ ಹೇಳಿದ ಅವಧಿಯಲ್ಲಿ ಹಣ ವಾಪಸ್ ನೀಡುತ್ತಿಲ್ಲವೇ ? ನಿಮ್ಮ ಹಣ ವಾಪಸ್ ಪಡೆಯಲು ನೀವು ಸಾಕಷ್ಟು ಶ್ರಮ ಹಾಕಿದ ಮೇಲೂ ಬೇಸರಗೊಂಡಿದ್ದೀರಾ ? ಕೊಟ್ಟ ಹಣ ವಾಪಸ್ ಬರುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆಯಾ ? ಹಾಗಾದ್ರೆ ನೀವು ಆ ವ್ಯಕ್ತಿ ಜೊತೆ ಜಗಳ, ವಾಗ್ವಾದಕ್ಕಿಳಿಯುವ ಬದಲು ಈ ರೀತಿ ಮಾಡಿದ್ರೆ ಸಾಕು ನಿಮ್ಮ ಹಣ ವಾಪಸ್ ಬರುತ್ತೆ.
ಅದೇನೆಂದರೆ ನಿಮ್ಮ ಹಣವನ್ನು ಇನ್ನೊಬ್ಬರು ಸಾಲ ಪಡೆದು ವಾಪಸ್ ನೀಡದಿದ್ದರೆ, ಕಾನೂನು ಸಹಾಯವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಹಣವನ್ನು ನೀವು ಮರಳಿ ಪಡೆಯಬಹುದು. ಮೊದಲನೆಯದಾಗಿ, ನೀವು ವಕೀಲರ ಸಹಾಯವನ್ನು ಪಡೆಯಬೇಕು. ಈ ಸಂದರ್ಭದಲ್ಲಿ ನಿಮ್ಮ ಹಕ್ಕುಗಳು ಮತ್ತು ಕಾನೂನು ಆಯ್ಕೆಗಳ ಬಗ್ಗೆ ವಕೀಲರು ನಿಮಗೆ ತಿಳಿಸುತ್ತಾರೆ.
ಇದರ ನಂತರ ನಿಮ್ಮಿಂದ ಸಾಲ ಪಡೆದ ವ್ಯಕ್ತಿಯ ವಿರುದ್ಧ ಕಾನೂನು ಮೊಕದ್ದಮೆ ಹೂಡಬೇಕು. ಪ್ರಕರಣ ದಾಖಲಿಸುವಾಗ ಸಂಬಂಧಪಟ್ಟವರು ನಿಮ್ಮಿಂದ ಸಾಲ ಪಡೆದಿದ್ದಾರೆ ಎಂಬುದನ್ನು ಸಾಬೀತುಪಡಿಸಬೇಕು.
ಇದನ್ನು ಸಾಬೀತುಪಡಿಸುವ ಮೂಲಕ ನೀವು ಪ್ರಕರಣವನ್ನು ಗೆದ್ದರೆ, ನಿಮ್ಮ ಹಣವನ್ನು ಮರಳಿ ಪಡೆಯುತ್ತೀರಿ.
ಇದಲ್ಲದೆ ಹಣವನ್ನು ಎರವಲು ಪಡೆದ ವ್ಯಕ್ತಿಗೆ ನೀವು ಕಾನೂನು ನೋಟಿಸ್ ಅನ್ನು ಸಹ ಕಳುಹಿಸಬಹುದು. ಲೀಗಲ್ ನೋಟಿಸ್ ಕಳುಹಿಸಿದ ನಂತರವೂ ಸಂಬಂಧಪಟ್ಟವರು ಹಣವನ್ನು ಹಿಂತಿರುಗಿಸದಿದ್ದರೆ, ನೀವು ಆ ವ್ಯಕ್ತಿಯ ವಿರುದ್ಧ ಸಿವಿಲ್ ಕೇಸ್ ದಾಖಲಿಸಬಹುದು, ಇದು ಉತ್ತಮ ಆಯ್ಕೆಯಾಗಿದೆ.
ನೀವು ವಕೀಲರ ಸಹಾಯದಿಂದ ಹಣ ವಾಪಸ್ ಪಡೆಯಲು ಮೊಕದ್ದಮೆಯನ್ನು ಸಲ್ಲಿಸಬೇಕು. ಇದನ್ನು ಮಾಡುವುದರಿಂದ ನಿಮ್ಮ ಹಣವನ್ನು ಮರಳಿ ಪಡೆಯಲು ನ್ಯಾಯಾಲಯವು ನಿಮಗೆ ಸಹಾಯ ಮಾಡುತ್ತದೆ.