alex Certify ಮೊಬೈಲ್​ IMEI ಸಂಖ್ಯೆ ಕುರಿತು ನಿಮಗೆಷ್ಟು ಗೊತ್ತು…? ತಿಳಿದಿರಲಿ ಈ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್​ IMEI ಸಂಖ್ಯೆ ಕುರಿತು ನಿಮಗೆಷ್ಟು ಗೊತ್ತು…? ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಎಲ್ಲಾ ಮೊಬೈಲ್​ಗಳಲ್ಲಿ 15 ಸಂಖ್ಯೆಗಳ IMEI ನಂಬರ್​ ಇರುತ್ತದೆ. ಇದು ನಿಮ್ಮ ಮೊಬೈಲ್ ​ನ್ನು ಗುರುತಿಸುವ ಒಂದು ಸಂಖ್ಯೆಯಾಗಿದೆ. IMEI ಎಂದರೆ ಅಂತಾರಾಷ್ಟ್ರೀಯ ಮೊಬೈಲ್​ ಸಾಧನ ಗುರುತು ಎಂದಾಗಿದೆ.

ನಿಮ್ಮ ಮೊಬೈಲ್​ಗೆ ಸಂಬಂಧಿಸಿದ ಅನೇಕ ಮಾಹಿತಿಯು ಇದರಲ್ಲಿ ಅಡಗಿರುವುದರಿಂದ IMEI ಸಂಖ್ಯೆ ನಿಜಕ್ಕೂ ವಿಶೇಷವಾಗಿದೆ. ಮೊದಲ 14 ಅಂಕೆಗಳನ್ನು GSM ಅಸೋಸಿಯೇಷನ್ ​​ಸಂಸ್ಥೆಯು ವ್ಯಾಖ್ಯಾನಿಸುತ್ತದೆ. ಆದರೆ ಕೊನೆಯ ಅಂಕೆಯು ಲುಹ್ನ್ ಸೂತ್ರದಿಂದ ನಿರ್ಮಿಸಲಾದ ಅಲ್ಗಾರಿದಮ್ ಆಗಿದೆ. IMEI ಸಂಖ್ಯೆ ಇಲ್ಲದ ಮೊಬೈಲ್ ಫೋನ್ ಬಳಸುವುದು ಕಾನೂನಿಗೆ ವಿರುದ್ಧವಾಗಿದೆ.

ಮಾಧ್ಯಮಗಳ ವರದಿಯ ಪ್ರಕಾರ ನಮ್ಮ ದೇಶದಲ್ಲಿ 25 ಮಿಲಿಯನ್​ಗೂ ಅಧಿಕ ಮಂದಿ ದೀರ್ಘ ಸಮಯದಿಂದ IMEI ಇಲ್ಲದ ಮೊಬೈಲ್​ ಫೋನ್​ನ್ನು ಬಳಕೆ ಮಾಡುತ್ತಿದ್ದರು. ಇಂತಹ ಫೋನ್​ಗಳನ್ನು 2009ರ ನವೆಂಬರ್​ 30ರಂದು ನಿಷ್ಕ್ರಿಯಗೊಳಿಸಲಾಯ್ತು. ಹಾಗಾದರೆ ಏನಿದು IMEI ಸಂಖ್ಯೆ..? ಯಾಕೆ ಈ ಸಂಖ್ಯೆಗೆ ಇಷ್ಟೊಂದು ಮಹತ್ವವಿದೆ..? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ :

IMEI ಸಂಖ್ಯೆಯಿಂದ ನಿಮಗಿರುವ ಲಾಭಗಳು :

ಒಂದು ವೇಳೆ ನಿಮ್ಮ ಮೊಬೈಲ್​ ಕಳುವಾದರೆ ನೀವು IMEI ಸಂಖ್ಯೆಯನ್ನು ಬಳಕೆ ಮಾಡಿ ನಿಮ್ಮ ಮೊಬೈಲ್​ ಫೋನ್​ನ್ನು ಪಡೆಯಬಹುದಾಗಿದೆ. ಇದೊಂದು ವಿಶಿಷ್ಟವಾದ ಸಂಖ್ಯೆಯಾಗಿದ್ದು ಪ್ರತಿಯೊಂದು ಮೊಬೈಲ್​ ಫೋನ್​ನಲ್ಲಿರುವ IMEI ಸಂಖ್ಯೆಯು ವಿಭಿನ್ನವಾಗಿಯೇ ಇರುತ್ತದೆ. ಅಪರಾಧಗಳು ನಡೆದ ಸಂದರ್ಭಗಳಲ್ಲಿ IMEI ಸಂಖ್ಯೆಯು ಪ್ರಮುಖ ಸಾಕ್ಷ್ಯವಾಗಿ ಬಳಕೆಯಾಗುತ್ತದೆ.

IMEI ಸಂಖ್ಯೆಯನ್ನು ಪಡೆಯುವುದು ಹೇಗೆ..?

ನಿಮ್ಮ ಮೊಬೈಲ್​ನ IMEI ಸಂಖ್ಯೆಯನ್ನು ಪಡೆದುಕೊಳ್ಳಲು ನೀವು *#06# ಸಂಖ್ಯೆಗೆ ಡಯಲ್​ ಮಾಡಬೇಕು. ಈ ನಂಬರ್​ಗೆ ಕರೆ ಮಾಡಿದ ತಕ್ಷಣ ನಿಮ್ಮ ಮೊಬೈಲ್​ ಪರದೆಯಲ್ಲಿ IMEI ಸಂಖ್ಯೆ ಕಾಣಿಸುತ್ತದೆ. ಆಂಡ್ರಾಯ್ಡ್​ ಫೋನ್​ಗಳಲ್ಲಿ IMEI ಸಂಖ್ಯೆಯನ್ನು ಪಡೆಯಲು ಮೊದಲು ಸೆಟ್ಟಿಂಗ್ಸ್​ಗೆ ಹೋಗಿ. ಇಲ್ಲಿ ಅಬೌಟ್​ ಎಂಬ ಆಯ್ಕೆ ಮೇಲೆ ಕ್ಲಿಕ್​ ಮಾಡಿ. ಇಲ್ಲಿ ನಿಮಗೆ IMEI ಬಗ್ಗೆ ಮಾಹಿತಿ ಸಿಗಲಿದೆ. IMEI ನ ಮೊದಲ 8 ಸಂಖ್ಯೆಯು ಇದು ಎಲ್ಲಿ ತಯಾರಿಸಲಾದ ಮೊಬೈಲ್​ ಎಂಬ ಮಾಹಿತಿಯನ್ನು ನೀಡುತ್ತದೆ. ಮುಂದಿನ 6 ಸಂಖ್ಯೆಯು ನಿಮ್ಮ ಮೊಬೈಲ್​ ಬಗ್ಗೆ ಮಾಹಿತಿ ನೀಡುತ್ತದೆ. ಈ ಸಂಖ್ಯೆಯು ನಿಮ್ಮ ಮೊಬೈಲ್​ನ ಸಾಫ್ಟ್​ವೇರ್ ವರ್ಶನ್​ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...