ಮಡಿಕೇರಿ : ಕೊಡಗು ಜಿಲ್ಲಾ ವ್ಯಾಪ್ತಿಯ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಎಚ್ಪಿ ಮತ್ತು 10 ಎಚ್ಪಿ ವರೆಗಿನ ನೀರಾವರಿ ವಿದ್ಯುತ್ ಪಂಪ್ಸೆಟ್ಗಳ ಗ್ರಾಹಕರು ಮಾಸಿಕ ಶುಲ್ಕವನ್ನು ಪಾವತಿಸಿದ ನಂತರವೇ ‘ಡಿಬಿಟಿ’ ನಲ್ಲಿ ಗ್ರಾಹಕರಿಗೆ ಸರ್ಕಾರದಿಂದ ಮರುಪಾವತಿಸಲು ತಿಳಿಸಿರುವುದರಿಂದ ಕಾಫಿ ಬೆಳೆಗಾರರ 10 ಎಚ್ಪಿ ಮತ್ತು 10 ಎಚ್ಪಿ ವರೆಗಿನ ನೀರಾವರಿ ವಿದ್ಯುತ್ ಪಂಪ್ಸೆಟ್ಗಳ ಗ್ರಾಹಕರು 7 ದಿನದೊಳಗೆ ಎಲ್ಲಾ ವಿದ್ಯುತ್ ಬಾಕಿ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸುವಂತೆ ಸೆಸ್ಕ್ ಇಇ ಅನಿತಾ ಬಾಯಿ ಅವರು ಕೋರಿದ್ದಾರೆ.
ಡಿಸೆಂಬರ್ 23 ರ ನಂತರ ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಸ್ಥಾವರಗಳಿಗೆ ನಿಗಮದ ನಿಯಮಾನುಸಾರ ಕ್ರಮವಹಿಸಲಾಗುವುದು, ‘ಡಿಬಿಟಿ’ ಯೋಜನೆಯಡಿ ನೋಂದಾಯಿಸಿಕೊಳ್ಳಲು ಆಧಾರ್ ಕಾರ್ಡ್, ಫ್ರೂಟ್ಸ್ ಐಡಿ ಮತ್ತು ಬಿಲ್ಲು ಪ್ರತಿ ದಾಖಲಾತಿಗಳನ್ನು ಹತ್ತಿರದ ಸೆಸ್ಕ್ ಕಚೇರಿಯಲ್ಲಿ ಕೂಡಲೇ ಸಲ್ಲಿಸಲು 10 ಎಚ್ಪಿ ವರೆಗಿನ ನೀರಾವರಿ ವಿದ್ಯುತ್ ಸ್ಥಾವರ ಹೊಂದಿರುವ ಕಾಫಿ ಬೆಳೆಗಾರರಲ್ಲಿ ಸೆಸ್ಕ್ ಎಂಜಿನಿಯರ್ ಅವರು ಕೋರಿದ್ದಾರೆ.