ಕೊರೊನಾ ಕಾರಣದಿಂದಾಗಿ ಅನೇಕ ವಾಹನ ಸವಾರರು, ಅಗತ್ಯ ದಾಖಲೆಗಳನ್ನು ನವೀಕರಿಸಿಲ್ಲ. ಆದ್ರೆ ನವೀಕರಿಸದ ದಾಖಲೆಗಳು ಅಕ್ಟೋಬರ್ 31ರವರೆಗೆ ಮಾತ್ರ ಮಾನ್ಯವಾಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ಮತ್ತು ಪರವಾನಿಗೆಯಂತಹ ವಾಹನಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳ ಮಾನ್ಯತೆಯನ್ನು ಅಕ್ಟೋಬರ್ 31, 2021 ರವರೆಗೆ ಮಾನ್ಯ ಮಾಡಿದೆ.
ಫೆಬ್ರವರಿ 21, 2020 ರ ನಂತರ ಯಾರ ದಾಖಲೆಗಳ ಅವಧಿ ಮುಗಿದಿದೆಯೋ ಅವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯ ಸರ್ಕಾರ ಮತ್ತು ಆರ್ಟಿಒ ಕಚೇರಿಗಳಿಗೆ ಮಾಹಿತಿ ರವಾನೆಯಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಕೇಜ್ರಿವಾಲ್ ಸರ್ಕಾರವು ರಾಜ್ಯದಲ್ಲಿ ವಾಹನ ದಾಖಲೆಗಳ ಸಿಂಧುತ್ವಕ್ಕಾಗಿ ಕೊನೆಯ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ. ಇಡೀ ದೇಶದಲ್ಲಿ, ವಾಹನಗಳ ದಾಖಲೆಗಳ ಸಿಂಧುತ್ವಕ್ಕೆ ಕೊನೆಯ ದಿನಾಂಕ ಅಕ್ಟೋಬರ್ 31.
ಕೊರೊನಾ ಹಿನ್ನಲೆಯಲ್ಲಿ ಈ ಗಡುವನ್ನು ಅನೇಕ ಬಾರಿ ವಿಸ್ತರಿಸಲಾಗಿದೆ. ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ಮತ್ತು ಪರವಾನಗಿಯನ್ನು ನವೀಕರಿಸಲು ಇನ್ನೂ ಸಮಯವಿದ್ದು, ಈ ತಿಂಗಳೊಳಗೆ ಕೆಲಸ ಮುಗಿಸಿ.