
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆ –ಸೆಟ್ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗೆ ಕೊನೆ ಅವಕಾಶ ಕಲ್ಪಿಸಲಾಗಿದೆ.
ದಿನಾಂಕ:11.07.2024 ರಿಂದ 22.07.2024 ರವರೆಗೆ ಜರುಗಿದ ಕೆಸೆಟ್-2023 ದಾಖಲಾತಿ ಪರಿಶೀಲನೆಗೆ ಅನಿವಾರ್ಯ ಕಾರಣಗಳಿಂದ ಹಾಜರಾಗದ ತಾತ್ಕಾಲಿಕ ಪಟ್ಟಿಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗಾಗಿ ದಿನಾಂಕ:31.07.2024ರಂದು ಕೊನೆಯ ಅವಕಾಶವನ್ನು ನೀಡಲಾಗಿದೆ.
ದಾಖಲಾತಿ ಪರಿಶೀಲನೆ ಸಂಪೂರ್ಣಗೊಂಡು ಪ್ರಮಾಣಪತ್ರ ಪಡೆಯದಿರುವ ಅಭ್ಯರ್ಥಿಗಳು ದಿನಾಂಕ:31.07.2024ರಂದು ಪ್ರಮಾಣ ಪತ್ರ ಪಡೆದುಕೊಳ್ಳಲು ಕೊನೆಯ ಅವಕಾಶವಾಗಿದೆ. ದಾಖಲಾತಿ ಪರಿಶೀಲನೆಯಾಗಿದ್ದು, ಪ್ರಮಾಣ ಪತ್ರವನ್ನು ದಿನಾಂಕ:31.07.2024ರಂದು ಖುದ್ದು ಹಾಜರಾಗಿ ಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಪೋಸ್ಟ್ ಮೂಲಕ ಕಳುಹಿಸಲಾಗುವುದು.
Phone: 080-23 564 583, e-mail: keauthority-ka@nic.in, Helpline: 080-23 460 460, Website: http://kea.kar.nic.in
