ಬೆಂಗಳೂರು : ಸರ್ಕಾರಿ ನೌಕರನ ಸೇರಿಕೆ ಕಾಲ (Joining Time) ದ ಬಗ್ಗೆ ನಿಮಗೆಷ್ಟು ಗೊತ್ತು? ಸೇರಿಕೆ ಕಾಲ ಎಂದರೇನು? ಈ ಲೇಖನದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.ಸರ್ಕಾರಿ ನೌಕರನು ಒಂದು ಹೊಸ ಹುದ್ದೆಗೆ ಹಾಜರಾಗಲು ಅಥವಾ ಅವನನ್ನು ನಿಯುಕ್ತಿಗೊಳಿಸಿದ ಸ್ಥಳಕ್ಕೆ ಹೋಗಲು ಅನುಮತಿಸಲಾದ ಕಾಲವನ್ನು ನಾವು ಸೇರಿಕೆ ಕಾಲ ಎಂದು ಕರೆಯುತ್ತೇವೆ.
2.ಸೇರಿಕೆ ಕಾಲ ಸರ್ಕಾರಿ ನೌಕರನಿಗೆ ಯಾವ ಸಂದರ್ಭದಲ್ಲಿ ಲಭಿಸುತ್ತದೆ?
ಯಾರೇ ಒಬ್ಬ ಸರ್ಕಾರಿ ನೌಕರನು ಸರ್ಕಾರದ ಹಿತಾಸಕ್ತಿ ಮೇರೆಗೆ ವರ್ಗಾವಣೆಯಾದಾಗ, ಆತನಿಗೆ ಆ ಹುದ್ದೆಗೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೇರಿಕೆ ಕಾಲ ಸಿಗುತ್ತದೆ.
3.ಯಾವ ಸಂದರ್ಭದಲ್ಲಿ ಒಬ್ಬ ಸರ್ಕಾರಿ ನೌಕರನಿಗೆ ಸೇರಿಕೆ ಕಾಲ ಲಭಿಸುವದಿಲ್ಲ?
ಯಾರೇ ಒಬ್ಬ ಸರ್ಕಾರಿ ನೌಕರನನ್ನು ಯಾವುದೇ ಒಂದು ವಿಶೇಷ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ನಿಯೋಜಿಸಿದಾಗ ಮತ್ತು ಆತನ ಸ್ವಂತ ಕೋರಿಕೆಯ ಮೇಲೆ ವರ್ಗಾವಣೆಯಾದಾಗ ಆತನಿಗೆ ಆ ಸ್ಥಳವನ್ನು ಹೋಗಿ ತಲುಪಲು ಬೇಕಾಗುವ ಪ್ರಯಾಣದ ಅವಧಿಯನ್ನು ಬಿಟ್ಟು ಆತನಿಗೆ ಯಾವುದೇ ಸೇರಿಕೆ ಕಾಲ ಲಭಿಸುವುದಿಲ್ಲ.
4.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗದೇ ಇದ್ದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಎಷ್ಟು ತಿಳಿಸಿ?
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗದೇ ಇದ್ದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭ್ಯವಾಗುವ ಸೇರಿಕೆ ಕಾಲಾವಧಿ ಈ ಕೆಳಕಂಡಂತೆ ಇದೆ.
ಎ.ಸರ್ಕಾರಿ ನೌಕರನು ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಟ್ಟಲ್ಲಿ, ಅದೇ ದಿನ ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಳ್ಳತ್ತಕ್ಕದ್ದು.
ಬಿ.ಸರ್ಕಾರಿ ನೌಕರನು ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಟ್ಟಲ್ಲಿ, ಮರುದಿನ ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಳ್ಳತ್ತಕ್ಕದ್ದು.
ಸಿ.ಸರ್ಕಾರಿ ನೌಕರನು ಮಧ್ಯಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಟ್ಟಲ್ಲಿ, ಮರುದಿನ ರಜಾದಿನವಾಗಿದ್ದರೆ, ಮುಂದಿನ ಕೆಲಸದ ದಿನದಂದು ಪೂರ್ವಾಹ್ನದಲ್ಲಿ ತನ್ನ ಕರ್ತವ್ಯದ ಚಾರ್ಜನ್ನು ವಹಿಸಿಕೊಳ್ಳತ್ತಕ್ಕದ್ದು.
ಡಿ.ಸರ್ಕಾರಿ ಕಛೇರಿಗಳು ಪೂರ್ವಾಹ್ನದಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದರೆ, ವರ್ಗಾವಣೆಗೊಂಡ ಸರ್ಕಾರಿ ನೌಕರನು ತನ್ನ ಕಾರಾಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ, ಆತನು ತನ್ನ ಮುಂದಿನ ಕರ್ತವ್ಯದ ಕಾರ್ಯಾಭಾರವನ್ನು ಮುಂದಿನ ಕೆಲಸದ ದಿನದ ಪೂರ್ವಾಹ್ನದಲ್ಲಿಯೇ ತನ್ನ ಕರ್ತವ್ಯದ ಚಾರ್ಜನ್ನು ತೆಗೆದುಕೊಳ್ಳತಕ್ಕದ್ದು.
5.ಪೂರ್ವಾಹ್ನವೆಂದರೆ ಎಷ್ಟು ಗಂಟೆ?
12 ಗಂಟೆಯೊಳಗಿನ ಸಮಯವನ್ನು ಪೂರ್ವಾಹ್ನವೆಂದು ಕರೆಯುವರು.
6.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಎಷ್ಟು ತಿಳಿಸಿ?
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ವರ್ಗಾವಣೆಯಿಂದ ಅವನ ಸ್ಥಳ/ನಿವಾಸ ಬದಲಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಈ ಕೆಳಕಂಡಂತೆ ಇದೆ.
ಹಳೆಯ ಕೇಂದ್ರ ಸ್ಥಾನ ಮತ್ತು ಹೊಸ ಕೇಂದ್ರ ಸ್ಥಾನದ ನಡುವಣ ದೂರು
ಪಡೆಯಬಹುದಾದ ಸೇರಿಕೆ ಕಾಲ
1000 ಕಿ.ಮಿ ಮತ್ತು ಕಡಿಮೆ 10 ದಿನಗಳು
1000 ಕಿ.ಮೀ ಗಿಂತಲೂ ಹೆಚ್ಚು 12 ದಿನಗಳು
2000 ಕಿ.ಮೀ ಗಿಂತಲೂ ಹೆಚ್ಚು 15 ದಿನಗಳು
(ವಿಮಾನದ ಮೂಲಕ ಪ್ರಯಾಣ ಮಾಡಿದಲ್ಲಿ ಗರಿಷ್ಠ 12 ದಿನಗಳು)
7.ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಆತನಿಗೆ ಮುಂದಿನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಲಭಿಸುವ ಸೇರಿಕೆ ಕಾಲಾವಧಿ ಯಾವಾಗಿನಿಂದ ಪ್ರಾರಂಭವಾಗುತ್ತದೆ ತಿಳಿಸಿ?
ಯಾವುದೇ ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರದ ಹಿತಾಸಕ್ತಿಯಲ್ಲಿ ಅವನ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ/ನಿವಾಸ ಬದಲಾವಣೆಯಾಗುವುಂತೆ ವರ್ಗಾವಣೆಯಾದಾಗ ಸೇರಿಕೆ ಕಾಲವು ಈ ಕೆಳಕಂಡಂತೆ ಪ್ರಾರಂಭವಾಗುತ್ತದೆ.
.ಆತನು ತನ್ನ ಕರ್ತವ್ಯದ ಪ್ರಭಾರವನ್ನು ಪೂರ್ವಾಹ್ನದಲ್ಲಿ ವಹಿಸಿಕೊಟ್ಟಿದ್ದರೆ ಹಳೆಯ ಹುದ್ದೆಯ ಪ್ರಭಾರವನ್ನು ತ್ಯಜಿಸಿದ ದಿನದಿಂದ ಪ್ರಾರಂಭವಾಗುತ್ತದೆ.