ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ನೀಡಲಾಗಿದ್ದು, ಸರ್ಕಾರಿ ನೌಕರರು, ಹಾಗೂ ಅವರ ಅವಲಂಬಿತ ಸದಸ್ಯರನ್ನು ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಲು ಹೆಚ್.ಆರ್.ಎಂ.ಎಸ್, 1.0 ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲು ನೂತನ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಸದಸ್ಯರನ್ನು ಯೋಜನೆಯಡಿಯಲ್ಲಿ ನೊಂದಾಯಿಸಿಕೊಳ್ಳಲು ಹೆಚ್.ಆರ್.ಎಂ.ಎಸ್, 1.0 ತಂತ್ರಾಂಶದಲ್ಲಿ (ವೆಬ್ ಅಪ್ಲಿಕೇಷನ್) https://hrms.karnataka.gov.in ಯುಆರ್ ಎಲ್ ಮೂಲಕ ಹಾಗೂ ಮೊಬೈಲ್ ಅಪ್ಲಿಕೇಷನ್ ನಲ್ಲಿ https://hrmsenroll.karnataka.gov.in ಯುಆರ್ ಎಲ್ ಮೂಲಕ ನೊಂದಾಯಿಸಿಕೊಳ್ಳಲು ಅವಕಶ ಕಲ್ಪಿಸಲಾಗಿದೆ.
ವೈದ್ಯಕೀಯ ಹಾಜರಾತಿ ನಿಯಮಗಳನ್ವಯ ಬಟವಾಡೆ ಅಧಿಕಾರಿಗಳು ಪ್ರತಿ ಫಲಾನುಭವಿಗಳ ದತ್ತಾಂಶವನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ಅನುಮೋದಿಸಬೇಕಾಗಿರುತ್ತದೆ. ನಂತರ ಚಿಕಿತ್ಸೆ ಪಡೆಯಲು ಅರ್ಹತೆ ಹೊಂದುತ್ತಾರೆ.
ಈ ಯೋಜನೆಗೆ ಒಳಪಡುವ ಎಲ್ಲಾ ಸರ್ಕಾರಿ ನೌಕರರು ಹಾಗೂ ಅವರ ಆವಲಂಬಿತ ಕುಟಂಬ ಸದಸ್ಯರು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ತಂತ್ರಾಂಶದಲ್ಲಿ ಮಾಹಿತಿಯನ್ನು ಇಂಧೀಕರಿಸುವಂತೆ ಬೆಂಗಳೂರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.