2022-23 ನೇ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಯು ಜುಲೈ 18 ರಿಂದ 25 ವರೆಗೆ ಕಲಬುರಗಿಯ ಐವಾನ-ವಿ-ಶಾಹಿ ಪ್ರದೇಶದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆ ವಿವರ:
ಜುಲೈ 18 ರಂದು ವಿಶೇಷ ಶಿಕ್ಷಕರ ಹುದ್ದೆಯ 01 ರಿಂದ 05 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ದೈಹಿಕ ಶಿಕ್ಷಕರ ಗ್ರೇಡ್-2 ಹುದ್ದೆಯ 01 ರಿಂದ 30 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ಮುಖ್ಯ ಶಿಕ್ಷಕರ ಹುದ್ದೆಯ 01 ರಿಂದ 17 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ಕೋರಿಕೆ ವರ್ಗಾವಣೆಗೆ 01 ರಿಂದ 300 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
ಜುಲೈ 19 ರಂದು ಕೋರಿಕೆ ವರ್ಗಾವಣೆಗೆ 301 ರಿಂದ 700 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ಜುಲೈ 20 ರಂದು ಕೋರಿಕೆ ವರ್ಗಾವಣೆಗೆ 701 ರಿಂದ 1143 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ಜುಲೈ 25 ರಂದು ಪರಸ್ಪರ ವರ್ಗಾವಣೆಗೆ 01 ರಿಂದ 09 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
ಪ್ರೌಢ ಶಾಲಾ ಶಿಕ್ಷಕರ ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆ ವಿವರ:
ಜುಲೈ 21 ರಂದು ವಿಶೇಷ ಶಿಕ್ಷಕರ ಹುದ್ದೆಯ 01 ರಿಂದ 40 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ದೈಹಿಕ ಶಿಕ್ಷಕರ ಹುದ್ದೆಯ 01 ರಿಂದ 95 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ಸಹ ಶಿಕ್ಷಕರ ಕೋರಿಕೆಯ 01 ರಿಂದ 200 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
ಜುಲೈ 22 ರಂದು ಸಹ ಶಿಕ್ಷಕರ ಕೋರಿಕೆಯ 201 ರಿಂದ 500 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ಜುಲೈ 23 ರಂದು ಸಹ ಶಿಕ್ಷಕರ ಕೋರಿಕೆಯ 501 ರಿಂದ 638 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ಹಾಗೂ ಜುಲೈ 25 ರಂದು ಸಹ ಶಿಕ್ಷಕರ ಪರಸ್ಪರ ವರ್ಗಾವಣೆಯ 01 ರಿಂದ 45 ರವರೆಗಿನ ಆದ್ಯತಾ ಸಂಖ್ಯೆಗೆ, ದೈಹಿಕ ಶಿಕ್ಷಕರ ಪರಸ್ಪರ ವರ್ಗಾವಣೆಯ 01 ರಿಂದ 02 ರವರೆಗಿನ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.
ಮೇಲ್ಕಂಡ ವೇಳಾಪಟ್ಟಿಯಂತೆ ಅರ್ಹ ಶಿಕ್ಷಕರು ಆದ್ಯತೆಯ ಸಂಖ್ಯೆಯಂತೆ ಪೂರಕ ದಾಖಲೆಗಳೊಂದಿಗೆ ವರ್ಗಾವಣೆ ಅರ್ಜಿಯ ಪ್ರತಿ, ಹಾಗೂ ಪೂರಕ ದಾಖಲಾತಿಗಳೊಂದಿಗೆ ಕೌನ್ಸಿಲಿಂಗ್ ನಡೆಯುವ ದಿನದಂದು ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ವಿಭಾಗೀಯ ಸಹ ನಿರ್ದೇಶಕರು ಹಾಗೂ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಲಿ ಕಲಬುರಗಿ ವಿಭಾಗದ ವರ್ಗಾವಣೆ ಪ್ರಾಧಿಕಾರಿಗಳಾದ ಅಮಿತಾ ಎನ್ ಯರಗೋಳಕರ್ ಅವರು ತಿಳಿಸಿದ್ದಾರೆ.