ಬಳ್ಳಾರಿ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2023-24 ಸಾಲಿನಲ್ಲಿ “ಕಲ್ಟಿವೇಷನ್ ಆಫ್ ಬಂಬೂ” ಕಾರ್ಯಕ್ರಮದಡಿ ಬಿದಿರಿನ ಕೃಷಿ ಮಾಡಲು ಸಹಾಯಧನಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಸಂಕಿನದಾಸ ಅವರು ತಿಳಿಸಿದ್ದಾರೆ.
ಜಿಲ್ಲೆಗೆ 53 ಎಕರೆ ಭೂಮಿ ಭೌತಿಕವಾಗಿ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜನಂಗದ ಫಲಾನುಭವಿಗಳ ಜಮೀನಿನಲ್ಲಿ ಬಿದಿರನ್ನು ಬೆಳೆಸಿ ಪೋಷಿಸುವ ಬಗ್ಗೆ ಮೂರು ವರ್ಷಗಳ ಅವಧಿಗೆ ರೂ.60 ಸಾವಿರ ಧರ ನಿಗದಿ ಪಡಿಸಲಾಗಿದ್ದು, ಶೇ.90ರಷ್ಟು ಭಾಗ ರೂ.54 ಸಾವಿರ ಹಾಗು ಶೇ.10 ಭಾಗ ರೂ.6000 ಗಳನ್ನು ನಿಗದಿಪಡಿಸಲಾಗಿದೆ, ಪರಿಶಿಷ್ಟ ವರ್ಗದ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಆಯಾ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲ್ಲೂಕು ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.