alex Certify ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಮುಖ್ಯ ಮಾಹಿತಿ

ಕಲಬುರಗಿ : 2022-23ನೇ ಸಾಲಿನ ಸಾಮಾನ್ಯ ವರ್ಗಾವಣೆಯ ಅಂತರ್ ವಿಭಾಗ ಮಟ್ಟದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ವೈದ್ಯಕೀಯ ಮತ್ತು ಅಂಗವಿಕಲ ಆದ್ಯತೆಯ ಮೇಲೆ (ಅಂತರ ಜಿಲ್ಲೆ ವರ್ಗಾವಣೆ) ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ನೀಡಿದೆ.

ವೈದ್ಯಕೀಯ ಪ್ರಮಾಣ ಪತ್ರಗಳ ಹಾಗೂ ಅಂಗವಿಕಲ ಪ್ರಮಾಣಪತ್ರದ ನೈಜತೆ ಕುರಿತು ಪರಿಶೀಲಿಸಲು ಇದೇ ಜುಲೈ 17 ರಿಂದ 19 ರವರೆಗೆ ಪ್ರತಿದಿನ ಬೆಳಿಗ್ಗೆ ೮ ಗಂಟೆಗೆ ಕಲಬುರಗಿಯ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆ (ಜಿಲ್ಲಾ ಆಸ್ಪತ್ರೆ) ಹಳೆಯ ಬಿಲ್ಡಿಂಗ್ ಯು.ಡಿ.ಐ.ಡಿ. ವಿಭಾಗ ರೂಮ್ ನಂ. 101ರ ಅಂಗವಿಕಲ ವಿಭಾಗದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಅಯುಕ್ತರ ಕಚೇರಿಯ ವಿಭಾಗೀಯ ಸಹ ನಿರ್ದೇಶಕ ಅಮಿತಾ ಎನ್. ಯರಗೋಳಕರ್ ಅವರು ತಿಳಿಸಿದ್ದಾರೆ.

 ಜುಲೈ 17 ರಂದು ವರ್ಗಾವಣೆ ಆದ್ಯತೆ ಪಟ್ಟಿ ಕ್ರಮ ಸಂಖ್ಯೆ 01 ರಿಂದ 72 ರವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು, ಜುಲೈ 18 ರಂದು ವರ್ಗಾವಣೆ ಆದ್ಯತೆ ಪಟ್ಟಿ ಕ್ರಮ ಸಂಖ್ಯೆ 73 ರಿಂದ 144 ರವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಜುಲೈ 19 ರಂದು ವರ್ಗಾವಣೆ ಆದ್ಯತೆ ಪಟ್ಟಿ ಕ್ರಮ ಸಂಖ್ಯೆ 145 ರಿಂದ 203 ರವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ವರ್ಗಾವಣೆ ಆದ್ಯತೆ ಪಟ್ಟಿ ಕ್ರಮ ಸಂಖ್ಯೆ 01 ರಿಂದ 14 ರವರೆಗಿನ ಪ್ರೌಢ ಶಾಲಾ ಶಿಕ್ಷಕರು ಜುಲೈ 19 ರಂದು ವೈದ್ಯಕಿಯ ಪರೀಕ್ಷೆಗೆ ಹಾಜರಾಗಬೇಕು.

ವರ್ಗಾವಣೆಗಾಗಿ ಸಲ್ಲಿಸಿರುವ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಯುಡಿಐಡಿ (UDID)  ಅಂಗವಿಕಲ ಪ್ರಮಾಣಪತ್ರಗಳ ದಾಖಲಾತಿಗಳೊಂದಿಗೆ ಚಿಕಿತ್ಸೆ ಪಡೆದಿರುವ ದಾಖಲಾತಿ ಮತ್ತು ಇತರೆ ಎಲ್ಲಾ ದಾಖಲಾತಿಗಳ ಎರಡು ಸೆಟ್ ಝೆರಾಕ್ಸ್ ಪ್ರತಿ ಹಾಗೂ ಗುರುತಿನ ಪತ್ರಗಳೊಂದಿಗೆ ಮೇಲ್ಕಂಡ ನಿಗದಿತ ದಿನಾಂಕದಂದು ಶಿಕ್ಷಕರು ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...