ಬೆಂಗಳೂರು : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಪ್ಲೊಮಾ ಡಿಗ್ರಿ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಶುಲ್ಕ ಮರುಪಾವತಿಗೆ ಎಸ್ ಎಸ್ ಪಿ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಗತ್ಯ ದಾಖಲೆಗಳು.
* ಎಸ್ ಎಸ್ ಎಲ್ ಸಿ ಅಂಕ ಪಟ್ಟಿ
* ಪಿಯುಸಿ ಅಂಕಪಟ್ಟಿ
* ಡಿಗ್ರಿ ಅಂಕಪಟ್ಟಿ ( ಡಿಗ್ರಿ ವಿದ್ಯಾರ್ಥಿಗಳಿಗೆ)
* ಪಿ ಜಿ ಅಂಕಪಟ್ಟಿ ( ಪಿ ಜಿ ವಿದ್ಯಾರ್ಥಿಗಳಿಗೆ)
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ತಂದೆ ತಾಯಿಯ ಆಧಾರ್ ಕಾರ್ಡ್
* ಜಾತಿ ಮತ್ತು ಆದಾಯ ದೃಢೀಕರಣ ಪತ್ರ
* ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಅಲ್ಪಸಂಖ್ಯಾತ ವರ್ಗಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಅರ್ಹತಾ ಷರತ್ತುಗಳು:
1. ವಿದ್ಯಾರ್ಥಿಯು ಅಲ್ಪಸಂಖ್ಯಾತ ಸಮುದಾಯಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ಸೇರಿದವರಾಗಿರಬೇಕು.
2. ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಗಳಿಗೆ ಭೇಟಿ ನೀಡುವ ಮೂಲಕ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು: https://ssp.karnataka.gov.in (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್)
3. ವಿದ್ಯಾರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು.
4. ವಿದ್ಯಾರ್ಥಿಯು ಹಿಂದಿನ ವರ್ಷದ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
5. ಕುಟುಂಬದ ಒಟ್ಟು ಆದಾಯವು ಮೆಟ್ರಿಕ್ ನಂತರದ (ಶುಲ್ಕ ಮರುಪಾವತಿ) 2.00 ಲಕ್ಷ ರೂ.ಗಳನ್ನು ಮೀರಬಾರದು ಮತ್ತು ಮೆರಿಟ್-ಕಮ್-ಮೀನ್ಸ್ (ಶುಲ್ಕ ಮರುಪಾವತಿ) ಗೆ 2.5 ಲಕ್ಷ ರೂ.ಗಳನ್ನು ಮೀರಬಾರದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 30, 2024 ಆಗಿದ್ದು, ಹೆಚ್ಚಿನ ವಿವರಗಳು, ಸೂಚನೆಗಳಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್ಸೈಟ್ ಗೆ ಭೇಟಿ ನೀಡಬಹುದು.
![](https://kannadadunia.com/wp-content/uploads/2024/01/scholar.jpg)