alex Certify ರೈತರಿಗೆ ಮಹತ್ವದ ಮಾಹಿತಿ : ಈ ಕೆಲಸ ಮಾಡಿದ್ರೆ ಮಾತ್ರ ನಿಮಗೆ ಸಿಗುತ್ತೆ `ಪಿಎಂ ಕಿಸಾನ್ ನಿಧಿ’ಯ 14 ನೇ ಕಂತು! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮಹತ್ವದ ಮಾಹಿತಿ : ಈ ಕೆಲಸ ಮಾಡಿದ್ರೆ ಮಾತ್ರ ನಿಮಗೆ ಸಿಗುತ್ತೆ `ಪಿಎಂ ಕಿಸಾನ್ ನಿಧಿ’ಯ 14 ನೇ ಕಂತು!

ಬೆಂಗಳೂರು : ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರಕಾರ ಪ್ರಾರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂ.ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ.

ಈ ಯೋಜನೆ ಪ್ರಾರಂಭಗೊಂಡ ಮೇಲೆ ಇದುವರೆಗೂ 13 ಕಂತುಗಳು ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿದ್ದು 14 ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. 14ನೇ ಕಂತಿನ ಹಣ ಶೀಘ್ರವೇ ಜಮಾ ಆಗುವ ಸಾಧ್ಯತೆ ಇದೆ. ಇ-ಕೆವೈಸಿ ಮಾಡಿಸಿದ ರೈತರಿಗೆ ಕೇಂದ್ರ ಸರಕಾರ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಹತ್ತಿರದ ಗ್ರಾಮ ಒನ್, ಸಿಎಸ್ಸಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹ ಇ ಕೆ ವೈ ಸಿ ಮಾಡಿಸಬಹುದಾಗಿದೆ ಇದನ್ನು ಹೊರತುಪಡಿಸಿ ತಮ್ಮಲ್ಲಿರುವ ಮೊಬೈಲ್‌ಗಳಲ್ಲಿಯೇ ಆಧಾರ್ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಹಣವನ್ನು ನೇರವಾಗಿ ಫಲಾನುಭವಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಹಣ ಕೈಸೇರಲು ಕಡ್ಡಾಯವಾಗಿ ರೈತರು ಆಧಾರ್ ಆಧಾರಿತ ಇ-ಕೆವೈಸಿ ಮಾಡಬೇಕಾಗಿದೆ.

ರೈತರೇ ಇ-ಕೆವೈಸಿ ನೀವೇ ಮಾಡಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಪಡೆಯಲು ರೈತರೇ ತಮ್ಮಲ್ಲಿರುವ ಮೊವೈಲ್‌ಗಳಲ್ಲಿ ಇ-ಕೆವೈಸಿ ನೋಂದಾಯಿಸಬಹುದು. ಮೊಬೈಲ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಿಎಂ ಕಿಸಾನ್ ಇಕೆವೈಸಿ ಎಂದು ಟೈಪ್ ಮಾಡಿ. ಇದರ ತಳ ಭಾಗದಲ್ಲಿ ಕಾಣುವ ಟು ಓಟಿಪಿ ಬೇಸ್ಡ್ ಇ-ಕೆವೈಸಿ ಕ್ಲಿಕ್ ಮಾಡಿದರೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ಕೇಳಿರುವ ಬಾಕ್ಸ್ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಎಂದು ತೋರಿಸುತ್ತೆ. ಅಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಿದರೆ ಆಗ ಆಧಾರ್ ಸಂಖ್ಯೆಗೆ ನೀಡಿರುವ ಮೊಬೈಲ್ ಸಂಖ್ಯೆ ಕೇಳುತ್ತದೆ. ಮೊಬೈಲ್ ಸಂಖ್ಯೆ ನಮೂದಿಸಿದ ಮೇಲೆ ಗೆಟ್ ಮೊಬೈಲ್ ಒಟಿಪಿ ಎಂದು ಕ್ಲಿಕ್ ಮಾಡಿದ ಮೇಲೆ ಮೊಬೈಲ್‌ಗೆ ನಾಲ್ಕು ಅಂಕೆಯ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಬ್ಮಿಟ್ ಓಟಿಪಿ ಎಂದು ಕ್ಲಿಕ್ ಮಾಡಿದರೆ ಆರು ಸಂಖ್ಯೆಯ ಓಟಿಪಿ ಬರುತ್ತದೆ. ಅದನ್ನು ಅಲ್ಲಿರುವ ಬಾಕ್ಸ್ನಲ್ಲಿ ಟೈಪ್ ಮಾಡಿ ಸಬ್ಮಿಟ್ ಮಾಡಿದರೇ ಇ-ಕೆವೈಸಿ ಡನ್ ಸಕ್ಸ್ಸ್ ಫುಲ್ ಬರುತ್ತದೆ.

ಅಥವಾ Google Play Store  ನಿಂದ PM KISAN GOI app aadhar face Rd app   ಡೌನ್‌ಲೋಡ್ ಮಾಡಿಕೊಂಡು ನಂತರ login  ಆಗಿ ಆಧಾರ್ ಸಂಖ್ಯೆಯನ್ನು ನಮೂದಿಸಿವುದು ನಂತರ ಆಧಾರ್ ಸಂಖ್ಯೆಯೊAದಿಗೆ ನೊಂದಣಿಯಾಗಿರುವ ಮೊಬೈಲ್‌ಗೆ OTP ರವಾನೆಯಾಗುತ್ತದೆ. ಹೀಗೆ ಸ್ವೀಕರಿಸಿದ OTP ಯನ್ನು ದಾಖಲಿಸುವುದು ನಂತರ Click here to complet e-KYC ಎಂಬ ಮಾಹಿತಿಯು ಗೋಚರಿಸುತ್ತದೆ. ಮತ್ತೇ OTP ದಾಖಲಿಸಿ I am agri for face authentication  ಎಂದು ನಮೂದಿಸುವುದು ನಂತರ ರೈತರ/ಫಲಾನುಭವಿಯ ಮುಕದ ಛಾಯ ಚಿತ್ರವನ್ನು ಕ್ಲೀಕ್ ಮಾಡುವುದು ನಂತರimage successfully processed  ಎಂಬ ಮಾಹಿತಿಯು ಗೋಚರಿಸುತ್ತದೆ. ನಂತರ e-KYC successful ಎಂಬ ಮಾಹಿತಿಯನ್ನು ಗೋಚರಿಸುತ್ತದೆ. ಹೀಗೆ face authentication  ಮೂಲಕ e-KYC ಮಾಡಿಸಬಹುದು.

ಈ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲಿಯೇ ಕೆ ವೈ ಸಿ ದಾಖಲಿಸಬಹುದಾಗಿದ್ದು, ಇದನ್ನು ಹೊರತುಪಡಿಸಿ ಗ್ರಾಮ ವನ್, ಸಿಎಸ್ಸಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹ ಇ ಕೆ ವೈ ಸಿ ಮಾಡಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...