ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಸೂಚನೆಯಂತೆ, ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪಿಂಚಣಿ ಪಡೆಯುತ್ತಿರುವವರಿಗೆ ಅಕ್ಟೋಬರ್-2023ರ ತಿಂಗಳಿನಿಂದ ಪಿಂಚಣಿದಾರರ ಖಾತೆಗೆ ನೇರ ಹಣ ಸಂದಾಯ (ಡಿಬಿಟಿ) ಮೂಲಕ ಪಿಂಚಣಿಯನ್ನು ವಿತರಿಸಲಾಗುವುದು.
ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಯಡಿ ಸಂಬಂಧಿಸಿದ ಫಲಾನುಭವಿಗಳು, ಪಿಂಚಣಿದಾರರು ತಾವು ಪಿಂಚಣಿ ಪಡೆಯುತ್ತಿರುವ ಬ್ಯಾಂಕ್, ಅಂಚೆ ಕಛೇರಿಯಲ್ಲಿ ಆಧಾರ್ ಸೀಡಿಂಗ್, ಎನ್‍ಪಿಸಿಐ ಮ್ಯಾಪಿಂಗ್, ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಆದ್ದರಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಕಾರ್ಡ, ಬ್ಯಾಂಕ್ ಪಾಸ್‍ಬುಕ್, ಪಿಂಚಣಿ ಆದೇಶ ನಕಲು ಪ್ರತಿಗಳನ್ನು ತಮಗೆ ಸಂಬಂಧಿಸಿದ ಬ್ಯಾಂಕ್, ಅಂಚೆ ಕಛೇರಿಯಲ್ಲಿ ಆಧಾರ್ ಸೀಡಿಂಗ್, ಎನ್‍ಪಿಸಿಐ ಮ್ಯಾಪಿಂಗ್, ಇ-ಕೆವೈಸಿಯನ್ನು ಸೆಪ್ಟೆಂಬರ್ 29, 2023 ರೊಳಗೆ ಮಾಡಿಸಿ, ನಂತರ ಸಂಬಂಧಿಸಿದ ತಹಶೀಲ್ದಾರ ಕಾರ್ಯಾಲಯದ ಪಿಂಚಣಿ ಶಾಖೆಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ.