alex Certify BIG NEWS : ಪಠ್ಯ ಪುಸ್ತಕ ಹಾಗೂ ದಿನಚರಿಗಳ ನಿರ್ವಹಣೆ ಕುರಿತು ‘ಶಿಕ್ಷಣ ಇಲಾಖೆ’ ಯಿಂದ ಮಾರ್ಗಸೂಚಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಪಠ್ಯ ಪುಸ್ತಕ ಹಾಗೂ ದಿನಚರಿಗಳ ನಿರ್ವಹಣೆ ಕುರಿತು ‘ಶಿಕ್ಷಣ ಇಲಾಖೆ’ ಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಶಾಲಾ 2024-25ನೇ ಶೈಕ್ಷಣಿಕ ಸಾಲಿಗೆ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು 4 ರಿಂದ 9 ನೇ ತರಗತಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಹಾಗೂ 1 ರಿಂದ 10 ನೇ ತರಗತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ದಿನಚರಿಗಳನ್ನು ಮುದ್ರಿಸಿ, ಸರಬರಾಜು ಮಾಡಲು ಉಲ್ಲೇಖಿತ ಸುತ್ತೋಲೆಯಲ್ಲಿ SATS ತಂತ್ರಾಂಶದ ಮೂಲಕ ಬೇಡಿಕೆಯನ್ನು ಸಲ್ಲಿಸಲು ತಿಳಿಸಲಾಗಿತ್ತು.

ಕಛೇರಿ ಹಂತದಿಂದ ಸಲ್ಲಿಕೆಯಾಗಿರುವ ಬೇಡಿಕೆಯನ್ವಯ ಅರ್ಹ L1 ಮುದ್ರಕರಿಗೆ ಕಾರ್ಯಾದೇಶ ಜಾರಿ ಮಾಡಿದ್ದು, ಮುದ್ರಣ ಮತ್ತು ಸರಬರಾಜು ಕಾರ್ಯ ಪ್ರಗತಿಯಲ್ಲಿರುತ್ತದೆ. ಅದರಂತೆ ವಲಯ/ಬ್ಲಾಕ್ಳಿಗೆ ಸರಬರಾಜಾಗುವ ಪಠ್ಯಪುಸ್ತಕಗಳನ್ನು ಸ್ವೀಕರಿಸಿ, ದಾಸ್ತಾನು ಮಾಡಿಕೊಂಡು, SATS ತಂತ್ರಾಂಶದಲ್ಲಿ ಶಾಲೆಗಳಿಂದ ದಾಖಲಿಸಿರುವ ಬೇಡಿಕೆಯನ್ವಯ ಸಂಬಂಧಿಸಿದ ಶಾಲೆಗಳಿಗೆ ವಿತರಿಸುವ ಕುರಿತು ಈ ಕೆಳಗೆ ಮಾರ್ಗದರ್ಶನ ನೀಡಿದ್ದು ಸೂಕ್ತ ಕ್ರಮವಹಿಸಲು ತಿಳಿಸಿದೆ.

1. ಪಠ್ಯಪುಸ್ತಕ ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ವಿತರಣೆ

2024-25ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ಬೇಡಿಕೆಯನ್ನು ಶಾಲೆಗಳಿಂದ ನೇರವಾಗಿ SATS ತಂತ್ರಾಂಶದ ಮೂಲಕ ಪಡೆಯಲಾಗಿದೆ. SATS ಮೂಲಕ ಶಾಲೆಗಳಿಂದ ಸಲ್ಲಿಕೆಯಾದ ಬೇಡಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಪರಿಶೀಲಿಸಿ ದೃಢೀಕರಿಸಲಾಗಿರುತ್ತದೆ. ಸದರಿ ಬೇಡಿಕೆಯನ್ವಯ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತಿದೆ.

ಉಚಿತ ವಿಭಾಗದಲ್ಲಿ ಸರ್ಕಾರಿ ಶಾಲೆಗಳು (Department of School Education), ಸ್ಥಳೀಯ ಸಂಸ್ಥೆಗಳು (Local bodies) ನಡೆಸುವ ಶಾಲೆಗಳು, ಅನುದಾನಿತ (Aided) ಶಾಲೆಗಳು ಮತ್ತು ಖಾಸಗಿ/ಅನುದಾನರಹಿತ ಶಾಲೆಗಳಲ್ಲಿನ ಆರ್.ಟಿ.ಇ. ಮಕ್ಕಳನ್ನೊಳಗೊಂಡಂತೆ ಪಠ್ಯಪುಸ್ತಕಗಳ ಕ್ರೋಢೀಕೃತ ಬೇಡಿಕೆ ಹಾಗೂ ಉಚಿತ ವಿಭಾಗದಲ್ಲಿನ ಸರ್ಕಾರಿ ಶಾಲೆಗಳಿಗೆ ಅಭ್ಯಾಸ ಪುಸ್ತಕ ಮತ್ತು ದಿನಚರಿಗಳ ಕ್ರೋಢೀಕೃತ ವಿತರಣಾ ಪಟ್ಟಿಯನ್ನೂ ನೀಡಲಾಗಿದೆ.
ಮಾರಾಟ ವಿಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ (Social Welfare) ಹಾಗೂ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆಯಡಿಯಲ್ಲಿ ಅನುಷ್ಠಾನಗೊಂಡ ಶಾಲೆಗಳು, ಖಾಸಗಿ ಅನುದಾನರಹಿತ ಶಾಲೆಗಳು (Un-aided) ಮತ್ತು ಇತರೆ (CBSE/ICSE/Others) ಶಾಲೆಗಳನ್ನೊಳಗೊಂಡ ವಠ್ಯಪುಸ್ತಕಗಳ ಕ್ರೋಢೀಕೃತ ವಿತರಣಾ ಪಟ್ಟಿಯನ್ನು ನೀಡಲಾಗಿದೆ.

2024-25ನೇ ಸಾಲಿಗೆ ಮಾರಾಟ ಪಠ್ಯಪುಸ್ತಕಗಳಿಗೆ ಎಸ್.ಎ.ಟಿ.ಎಸ್. ಮುಖಾಂತರ ಸಲ್ಲಿಕೆಯಾಗಿರುವ ಬೇಡಿಕೆಯ ಶೇ.10 ರಷ್ಟು ಮುಂಗಡ ಹಣ ಪಾವತಿಸಿರುವ ಶಾಲೆಗಳಿಗೆ ಶೇ.100 ರಷ್ಟು ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಶೇ.10 ರಷ್ಟು ಮುಂಗಡ ಹಣ ಪಾವತಿಸದೇ ಇರುವ ಶಾಲೆಗಳಿಗೂ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಖಾಸಗಿ ಅನುದಾನ ರಹಿತ ಶಾಲೆಗಳಿಂದ ಶೇ.100 ರಷ್ಟು ಹಣ ಪಾವತಿಸಿದ ನಂತರ ವಿತರಣೆ ಮಾಡಲು ಕ್ರಮವಹಿಸುವುದು. ಆದಕಾರಣ ಈಗಾಗಲೇ ಈ ಕಛೇರಿಯಿಂದ ನೀಡಲಾಗಿರುವ ವಿತರಣಾ ಪಟ್ಟಿಯ ಪ್ರಕಾರ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗುವುದು. ಸರಬರಾಜು ಆಗುವ ಪಠ್ಯಪುಸ್ತಕಗಳನ್ನು ವಿತರಣಾ ಪಟ್ಟಿಯನ್ವಯ ವರಿಶೀಲಿಸಿ. ಸ್ವೀಕರಿಸಲು ಸೂಚಿಸಿದೆ. ಪಠ್ಯಪುಸ್ತಕಗಳನ್ನು ಸ್ವೀಕರಿಸಿದ ಬಗ್ಗೆ ಸಂಬಂಧಿಸಿದ ಮುದ್ರಕರಿಗೆ ಅಂದೇ ಸ್ವೀಕೃತಿ ನೀಡುವುದು. ಸ್ವೀಕೃತಿಯಲ್ಲಿ ನಿಖರವಾಗಿ ವಿವರ ದಾಖಲಿಸಿ ದಿನಾಂಕದೊಂದಿಗೆ ಸಹಿಯನ್ನು ಕಡ್ಡಾಯವಾಗಿ ಮಾಡಿರಬೇಕು. ಸ್ವೀಕೃತಿಯಲ್ಲಿ ಯಾವುದೇ ತಿದ್ದುಪಡಿ ಮಾಡಿದಲ್ಲಿ ತಿದ್ದುಪಡಿಯಲ್ಲಿ ಕಿರುಸಹಿ ಮಾಡುವುದು.

ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ಮುದ್ರಕರಿಂದ ಸರಬರಾಜಾಗುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ವಿವರವನ್ನು ಎಸ್.ಎ.ಟಿ.ಎಸ್. ಬೇಡಿಕೆಯನ್ವಯ ವಿತರಣಾ ಪಟ್ಟಿಯನ್ನು (Distribution List) ಇ-ಮೇಲ್ ಮೂಲಕ ರವಾನಿಸಲಾಗಿದೆ. ಇ-ಮೇಲ್ ಮೂಲಕ ಪಡೆದ ವಿತರಣಾ ಪಟ್ಟಿಯನ್ನು SATS ಅಂಕಿ ಅಂಶಗಳನ್ವಯ ಪರಿಶೀಲಿಸಿಕೊಂಡು ಅದರಂತೆ ಪಠ್ಯಪುಸ್ತಕಗಳು ಸರಬರಾಜಾಗುತ್ತಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು. ಸರಬರಾಜಾದ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬಗ್ಗೆ SATS ತಂತ್ರಾಂಶದಲ್ಲಿ ಸ್ವೀಕೃತಿಯನ್ನು ಅಂದೇ ದಾಖಲಿಸುವುದು. ಅನಿವಾರ್ಯ ಕಾರಣದಿಂದಾಗಿ ಸ್ವೀಕೃತಿಯನ್ನು ಅಂದೇ ದಾಖಲಿಸಲು ಸಾಧ್ಯವಾಗದಿದ್ದಲ್ಲಿ ಮರುದಿನ ಪೂರ್ವಾಹ್ನವೇ ಪಠ್ಯಪುಸ್ತಕಗಳನ್ನು ಸ್ವೀಕರಿಸಿರುವ ದಿನಾಂಕದೊಂದಿಗೆ ಕಡ್ಡಾಯವಾಗಿ ದಾಖಲಿಸುವುದು.

ರಾಜ್ಯದ ಎಲ್ಲಾ ಜಿಲ್ಲಾ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ನೋಡಲ್ ಅಧಿಕಾರಿಗಳು, ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ನೀಡಿದ ವಿತರಣಾ ಪಟ್ಟಿ ಮತ್ತು ಶಾಲೆಗಳು SATS ನಲ್ಲಿ ದಾಖಲಿಸಿರುವ ಬೇಡಿಕೆ ಪಟ್ಟಿಯಲ್ಲಿರುವ ಅಂಕಿ ಅಂಶಗಳು ಹೊಂದಾಣಿಕೆ ಆಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು. ಮುದ್ರಕರಿಂದ ಸರಬರಾಜಾದ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಬೇಡಿಕೆಯಂತೆ, ಶೀರ್ಷಿಕೆವಾರು SATS ಅಂಕಿ ಅಂಶಗಳನ್ನಯ ಪರಿಶೀಲಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಬ್ಲಾಕ್ ಹಂತದಲ್ಲಿ ಸಂಬಂಧಿಸಿದ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿ/ಸಿಬ್ಬಂದಿ ಸ್ವೀಕರಿಸಿ, ಸ್ವೀಕೃತವಾದ ಪುಸ್ತಕಗಳಿಗೆ ಮಾತ್ರ ಸ್ವೀಕೃತಿಯನ್ನು ನೀಡತಕ್ಕದ್ದು, ವ್ಯತ್ಯಾಸವಾದಲ್ಲಿ ಪಠ್ಯಪುಸ್ತಕಗಳ ಕೊರತೆ/ ವ್ಯತ್ಯಯಗಳಿಗೆ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ನೇರವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಸುತ್ತೋಲೆ ಹೊರಡಿಸಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...