ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಮಹತ್ವದ ಸ್ಥಾನವಿದೆ. ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ ಹಾಗೂ ಗಂಗೆ ಸ್ನಾನ ಪವಿತ್ರವಾದದ್ದು. ಕಾರ್ತಿಕ ಮಾಸದಲ್ಲಿ ದೀಪಗಳನ್ನು ದಾನ ನೀಡುವ ಜೊತೆಗೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ.
ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರದ ಈ ನೌಕರರಿಗೆ ಶಾಕ್
ಯಶಸ್ಸು, ಸುಖ, ಸಮೃದ್ಧಿ ಪ್ರಾಪ್ತಿಗೆ ತುಳಸಿ ಪೂಜೆ ಮಾಡಲಾಗುತ್ತದೆ. ತುಳಸಿ ಎಲೆಯ ಕೆಲ ಉಪಾಯಗಳನ್ನು ಅನುಸರಿಸಿದ್ರೆ ಅರ್ಧಕ್ಕೆ ನಿಂತ ಕೆಲಸ ಕೈಗೂಡುತ್ತದೆ ಎಂದು ನಂಬಲಾಗಿದೆ.
ಉದ್ಯೋಗ ಹಾಗೂ ವ್ಯವಹಾರದಲ್ಲಿ ಪ್ರಗತಿ ಬಯಸುವವರು ಗುರುವಾರದ ದಿನ ತುಳಸಿ ಗಿಡಕ್ಕೆ ಹಳದಿ ಬಟ್ಟೆಯನ್ನು ಹಾಕಬೇಕು. ಹೀಗೆ ಮಾಡಿದಲ್ಲಿ ಉದ್ಯೋಗದಲ್ಲಿ ಏಳ್ಗೆ ಕಾಣಬಹುದು.
ತಪ್ಪಾದ ಖಾತೆಗೆ ವರ್ಗಾವಣೆಯಾಗಿದೆಯಾ ಹಣ…? ಹಿಂಪಡೆಯಲು ಇಲ್ಲಿದೆ ಟಿಪ್ಸ್
ಕಾರ್ತಿಕ ಮಾಸದಲ್ಲಿ ತುಳಸಿ ಗಿಡ ನೆಡುವ ಜೊತೆಗೆ ಶ್ರೀಹರಿ ನಾರಾಯಣನ ಚಿತ್ರ ಅಥವಾ ಪ್ರತಿಮೆಯನ್ನು ಇಡಿ. ಅದಕ್ಕೆ ತುಳಸಿಯ 11 ಎಲೆಗಳನ್ನು ಹಾಕಿ. ಹೀಗೆ ಮಾಡಿದ್ರೆ ಆರ್ಥಿಕ ಸಮಸ್ಯೆ ಎಂದೂ ಎದುರಾಗುವುದಿಲ್ಲ.
ಧನ ಲಾಭಕ್ಕಾಗಿ 11 ಎಲೆಗಳನ್ನು ತೆಗೆಯಿರಿ. ನೀವು ಗೋಧಿ ಹಿಟ್ಟನ್ನು ಇಡುವ ಪಾತ್ರೆಯಲ್ಲಿ ತುಳಸಿ ಎಲೆಗಳನ್ನು ಇಡಿ. ತುಳಸಿ ಎಲೆಯನ್ನಿಟ್ಟ ಹಿಟ್ಟನ್ನು ಬಳಸುವುದ್ರಿಂದ ಕೆಲವೇ ದಿನಗಳಲ್ಲಿ ಫಲಿತಾಂಶ ಕಾಣಬಹುದು.
ಕಾರ್ತಿಕ ಮಾಸದಲ್ಲಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ದೇವರ ಮನೆ ಹಾಗು ಮನೆಯ ಮುಖ್ಯ ಬಾಗಿಲಿನ ಮುಂದೆ ದೀಪ ಹಚ್ಚಿ. ಪ್ರತಿ ದಿನ ನೆಲದ ಮೇಲೆ ಮಲಗಿರಿ.