ಬೆಂಗಳೂರು : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಲಾಗಿದ್ದು ಅಕ್ಟೋಬರ್ 07 ರಿಂದ ಅನ್ವಯವಾಗುವಂತೆ ಅನುಷ್ಟಾನಗೊಳಿಸಲಾಗಿದೆ.
ಸರ್ಕಾರದ ಸುತ್ತೋಲೆಯ ಸೂಚನೆ ಮೇರೆಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಸ್ವತ್ತಿನ ನಮೂನೆ 2/3ನ್ನು ನೀಡಲು ಹಾಗೂ ಹಕ್ಕು ವರ್ಗಾವಣೆಗೆ ಕ್ರಮವಹಿಸಲು ಮತ್ತು ಇ-ಆಸ್ತಿ ತಂತ್ರಾಂಶವನ್ನು ಹೊರತುಪಡಿಸಿ ಭೌತಿಕವಾಗಿ ಹಾಗೂ ಖಾಸಗಿ ತಂತ್ರಾಂಶವನ್ನು ಬಳಕೆ ಮಾಡಿ ನಮೂನೆ 2/3ನ್ನು ನೀಡಬಾರದಾಗಿ ಆದೇಶವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಅ.07 ರಿಂದ ನಗರ ವ್ಯಾಪ್ತಿಯಲ್ಲಿ ಸ್ವತ್ತಿ ನಮೂನೆ 2/3ನ್ನು ಇ-ಆಸ್ತಿ ತಂತ್ರಾಂಶದಲ್ಲಿ ವಿತರಿಸಲಾಗುವುದು, ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.