ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಈಗ ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿಯಾಗುತ್ತಿದ್ದಾರೆ.
ಪದಕದ ಸಾಧನೆಗೈದು ಮಂಗಳವಾರದಂದು ಟೋಕಿಯೋದಿಂದ ಇಂಫಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೀರಾಬಾಯಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ವಿಮಾನ ನಿಲ್ದಾಣದಲ್ಲಿ ತಮ್ಮ ತಾಯಿಯನ್ನು ಕಂಡ ಚಾನು ಭಾವುಕರಾಗಿ ಆನಂದಭಾಷ್ಪ ಸುರಿಸಿದ್ದಾರೆ.
ಮಣಿಪುರ ಸರ್ಕಾರವು ಚಾನುಗೆ ಒಂದು ಕೋಟಿ ರೂಪಾಯಿ ಇನಾಮು ಘೋಷಿಸಿದೆ.