ತಾಯ್ತನ ಅನ್ನೋದು ಮಹಿಳೆಯ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ತಾಯಿಯಾದ ನಂತರ ನಮ್ಮ ಸಂಪೂರ್ಣ ಗಮನವು ನವಜಾತ ಶಿಶುವಿನ ಕಡೆಗಿರುತ್ತದೆ. ಆದರೆ ಮಗುವಿನ ಜೊತೆಜೊತೆಗೆ ತಾಯಿ ತನ್ನ ಬಗ್ಗೆಯೂ ಕಾಳಜಿ ವಹಿಸಬೇಕು. ಏಕೆಂದರೆ ಹೆರಿಗೆಯ ಬಳಿಕ ಮಹಿಳೆಯ ದೇಹವು ತುಂಬಾ ದುರ್ಬಲವಾಗಿರುತ್ತದೆ.
ಹೆರಿಗೆಯ ಸಂಪೂರ್ಣ ಪ್ರಕ್ರಿಯೆಯಿಂದ ಮಹಿಳೆ ದಣಿದಿರುತ್ತಾಳೆ. ಪ್ರಸವ ತುಂಬಾ ನೋವಿನಿಂದ ಕೂಡಿದ ಪ್ರಕ್ರಿಯೆ. ಇಷ್ಟೇ ಅಲ್ಲ ಹೆರಿಗೆಯಲ್ಲಿ ಸಾಕಷ್ಟು ರಕ್ತ ನಷ್ಟವೂ ಆಗುವುದರಿಂದ ದೇಹವು ದುರ್ಬಲವಾಗಿರುತ್ತದೆ. ಆ ಸಮಯದಲ್ಲಿ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ.
ಹಾಗಾಗಿ ಪ್ರಸವದ ನಂತರ ತಕ್ಷಣವೇ ಕೆಲವು ಕೆಲಸಗಳನ್ನು ಮಾಡಬೇಕು. ಈ ಕೆಲಸಗಳು ಮಹಿಳೆಯರಿಗೆ ಶಕ್ತಿ ಕೊಡುತ್ತವೆ. ಇವುಗಳನ್ನು ಮಾಡುವುದರಿಂದ ಬಹಳ ಬೇಗ ಚೇತರಿಸಿಕೊಳ್ಳಬಹುದು.
ಬಿಸಿ ನೀರು ಕುಡಿಯಿರಿ
ಹೆರಿಗೆಯ ನಂತರ ಮಹಿಳೆಯರು ಬಿಸಿನೀರು ಕುಡಿಯುವುದು ಬಹಳ ಮುಖ್ಯ. ಬಿಸಿನೀರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ. ಬೆಚ್ಚಗಿನ ನೀರಿನಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಇದೆ. ಇದು ಯೋನಿ ಗೋಡೆಗಳನ್ನು ಸಂಕುಚಿತಗೊಳಿಸುವ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಹೆರಿಗೆಯ ನಂತರ ಮಹಿಳೆಯರು ಹಲವಾರು ದಿನಗಳವರೆಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಹೆರಿಗೆಯ ನಂತರ ನೋವು ಮತ್ತು ಸೆಳೆತ ಕಡಿಮೆಯಾಗುತ್ತದೆ. ದೇಹಕ್ಕೆ ಶಕ್ತಿ ನೀಡುವ ಮೂಲಕ ತ್ವರಿತವಾಗಿ ಚೇತರಿಸಿಕೊಳ್ಳಬಹುದು.
ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ
ಹೆರಿಗೆಯ ನಂತರ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಬೇಕು. ಹೆರಿಗೆಯ ಸಮಯದಲ್ಲಿ ಮತ್ತು ನಂತರ ಮಹಿಳೆಯರು ದಣಿದಿರುತ್ತಾರೆ, ದುರ್ಬಲರಾಗುತ್ತಾರೆ. ಹಾಗಾಗಿ ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆಯಿಂದ ಶಕ್ತಿ ಮರಳುತ್ತದೆ, ಶೀಘ್ರದಲ್ಲೇ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೆರಿಗೆ ಬಳಿಕ ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು, ಮೊದಲ ಕೆಲವು ವಾರಗಳಲ್ಲಿ ಕನಿಷ್ಠ 10-12 ಗಂಟೆ ನಿದ್ರಿಸಬೇಕು.
ವಿಟಮಿನ್ ಸಪ್ಲಿಮೆಂಟ್ ಸೇವನೆ
ಹೆರಿಗೆಯ ನಂತರ ವಿಟಮಿನ್ ಸಪ್ಲಿಮೆಂಟ್‌ಗಳನ್ನು ಸೇವಿಸಬೇಕು. ವಿಟಮಿನ್ ಸಿ, ವಿಟಮಿನ್ ಡಿ, ಕಬ್ಬಿಣ, ಕ್ಯಾಲ್ಸಿಯಂ, ಸತು ಇತ್ಯಾದಿ ಜೀವಸತ್ವಗಳು ಮತ್ತು ಖನಿಜಗಳು ದೇಹದ ದೌರ್ಬಲ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸ್ತನ್ಯಪಾನಕ್ಕೂ ಅವು ಅವಶ್ಯಕ.
ಬಿಸಿಯಾದ ಪೌಷ್ಟಿಕ ಆಹಾರ
ಸಾಕಷ್ಟು ಪ್ರಮಾಣದ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವು ಬಿಸಿ ಬಿಸಿ ಸೂಪ್, ಬೇಳೆಕಾಳುಗಳು, ತರಕಾರಿಗಳು, ಮೊಟ್ಟೆ, ಹಾಲು ಇತ್ಯಾದಿಗಳಲ್ಲಿ ಕಂಡುಬರುತ್ತದೆ. ಇವುಗಳನ್ನೆಲ್ಲ ಹೆರಿಗೆ ಬಳಿಕ ಸೇವನೆ ಮಾಡಬೇಕು. ಇದು ಹೆರಿಗೆಯ ನಂತರ ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ.