ನವದೆಹಲಿ : ಮುಂದಿನ ಎರಡು ದಿನಗಳಲ್ಲಿ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ (ಎನ್ಸಿಆರ್) ದಟ್ಟವಾದ ಮಂಜು ಹಾಗೂ ಭಾರಿ ಶೀತ ವಾತಾವರಣ ಇರುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಶುಕ್ರವಾರ, ದೆಹಲಿಯಲ್ಲಿ ಗರಿಷ್ಠ ತಾಪಮಾನ 19.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಋತುಮಾನದ ಸರಾಸರಿಗಿಂತ ಒಂದು ಡಿಗ್ರಿ ಕಡಿಮೆಯಾಗಿದೆ. ನಗರವು ದಟ್ಟ ಮಂಜಿನಿಂದ ಕೂಡಿದ್ದು, ಸಾರಿಗೆ ಸೇವೆಗಳಲ್ಲಿ ಅಡೆತಡೆಗಳಿಗೆ ಕಾರಣವಾಯಿತು. ಪ್ರತಿಕೂಲ ಹವಾಮಾನದಿಂದಾಗಿ ದೆಹಲಿಗೆ ತೆರಳಬೇಕಿದ್ದ ಹನ್ನೊಂದು ರೈಲುಗಳು ವಿಳಂಬವಾದವು.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಬೆಳಿಗ್ಗೆ ಮಂಜು ಕವಿದ ವಾತಾವರಣಕ್ಕೆ ಸಾಕ್ಷಿಯಾಗಿದ್ದು, ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ. ದಟ್ಟ ಮಂಜಿನ ಸಮಯದಲ್ಲಿ ಕನಿಷ್ಠ ಗೋಚರತೆ 150 ಮೀಟರ್ ಎಂದು ವರದಿಯಾಗಿದೆ.