ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಇತ್ತೀಚೆಗೆ ಉಂಟಾದ ಮೈಚಾಂಗ್ ಚಂಡಮಾರುತ ಅಬ್ಬರದಿಂದ ತಮಿಳುನಾಡಿನಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಅದರಲ್ಲೂ ರಾಜಧಾನಿ ಚೆನ್ನೈನಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಜನಸಾಮಾನ್ಯರು ತತ್ತರಿಸಿದ್ದರು.
ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಟೀಕೆಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಜನಸಾಮಾನ್ಯರಿಂದ ಆಕ್ರೋಶ ಕೂಡ ವ್ಯಕ್ತವಾಗಿತ್ತು. ವಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಪ್ರವಾಹ ಪರಿಸ್ಥಿತಿ ಭೀಕರತೆಯನ್ನು ಬಿಂಬಿಸುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ವೈರಲ್ ಆಗಿರುವ ಫೋಟೋ ಕೂಡ ಪ್ರವಾಹದ ಭೀಕರತೆಯನ್ನು ಬಿಂಬಿಸುವಂತಿದೆ. ಈ ಫೋಟೋದಲ್ಲಿ ಸ್ಟಾಲಿನ್ ಚಿತ್ರ ಮೂಡಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ಭಾರಿ ಸಂಖ್ಯೆಯ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.