alex Certify ‘ನಾನು ಭಾರತೀಯನಾಗಿ ಇಲ್ಲಿದ್ದೇನೆ’: ಭಾರತ್ ಜೋಡೋ ಯಾತ್ರೆಯಲ್ಲಿ ನಟ ಕಮಲ್ ಹಾಸನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾನು ಭಾರತೀಯನಾಗಿ ಇಲ್ಲಿದ್ದೇನೆ’: ಭಾರತ್ ಜೋಡೋ ಯಾತ್ರೆಯಲ್ಲಿ ನಟ ಕಮಲ್ ಹಾಸನ್

ನವದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ ಖ್ಯಾತ ನಟ ಕಮಲ್ ಹಾಸನ್ ಭಾಗಿಯಾಗಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ ಶನಿವಾರ ದೆಹಲಿ ಪ್ರವೇಶಿಸಿದೆ.

ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 7 ರಂದು ಪ್ರಾರಂಭವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಮಲ್ ಹಾಸನ್ ಅವರು “ಇಂಡಿಯನ್ 2” ಚಿತ್ರೀಕರಣದಿಂದ ವಿರಾಮ ಪಡೆದು ದೆಹಲಿಗೆ ಆಗಮಿಸಿದ್ದರು.

ಯಾತ್ರೆಯ ವೇಳೆ ಮಾತನಾಡಿದ ಅವರು, ಹಲವರು ನನ್ನನ್ನು ಕೇಳುತ್ತಾರೆ. ನಾನು ಯಾಕೆ ಇಲ್ಲಿದ್ದೇನೆ ಎಂದು. ನಾನು ಭಾರತೀಯನಾಗಿ ಇಲ್ಲಿದ್ದೇನೆ. ನನ್ನ ತಂದೆ ಕಾಂಗ್ರೆಸ್ಸಿಗರಾಗಿದ್ದರು. ನಾನು ವಿವಿಧ ಸಿದ್ಧಾಂತಗಳನ್ನು ಹೊಂದಿದ್ದೇನೆ. ನನ್ನದೇ ಆದ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದೇನೆ. ಆದರೆ ದೇಶದ ವಿಷಯಕ್ಕೆ ಬಂದಾಗ, ಎಲ್ಲಾ ರಾಜಕೀಯ ಬದಿಗೊತ್ತಿ ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರಿ, ಅಳಿಯ ಮತ್ತು ಮೊಮ್ಮಕ್ಕಳು ರಾಹುಲ್ ಗಾಂಧಿ ಅವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಡೀ ಕುಟುಂಬ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...