alex Certify 76ರ ಇಳಿವಯಸ್ಸಲ್ಲೂ ವೃದ್ದನಿಂದ ಫಿಟ್ನೆಸ್ ಗೋಲ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

76ರ ಇಳಿವಯಸ್ಸಲ್ಲೂ ವೃದ್ದನಿಂದ ಫಿಟ್ನೆಸ್ ಗೋಲ್‌…!

ದೇಶದಲ್ಲಿರುವ ಲೆಕ್ಕವಿಲ್ಲದಷ್ಟು ಫಿಟ್ ಸರ್ದಾರರ ಸಾಲಿಗೆ ಸೇರುವ 76 ವರ್ಷದ ತ್ರಿಪಾಠ್ ಸಿಂಗ್ ತಮ್ಮ ಅದ್ಭುತ ಫಿಟ್ನೆಸ್‌ನಿಂದ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ. ಹೊಸ ಫಿಟ್ನೆಸ್ ಗೋ‌ಲ್‌ಗಳನ್ನು ಸೆಟ್ ಮಾಡುತ್ತಿರುವ ತ್ರಿಪಾಠ್‌ರ ಜೀವನಗಾಥೆಯನ್ನು ’ಹ್ಯೂಮನ್ಸ್ ಆಫ್ ಬಾಂಬೆ’ ಫೇಸ್ಬುಕ್ ಪೇ‌ಜ್‌ನಲ್ಲಿ ಶೇರ್‌ ಮಾಡಲಾಗಿದೆ.

ವರ್ಕ್‌ಔಟ್ ಮಾಡುತ್ತಾ ತಮ್ಮ ಜೀವನದ ಕುರಿತು ವಿವರಿಸುತ್ತಿರುವ ಸರ್ದಾರ್‌ಜೀರನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. 1999ರಲ್ಲಿ ಮಡದಿಯನ್ನು ಕಳೆದುಕೊಂಡ ಬಳಿಕ ತಮ್ಮ ಜೀವನದಲ್ಲಿ ಬಂದ ನೋವುಗಳಿಂದ ಡಿಪ್ರೆಸ್ ಆಗಿದ್ದ ತ್ರಿಪಾಠ್‌ ಒಂದು ಸಂದರ್ಭದಲ್ಲಿ ಸ್ಥೂಲಕಾಯಿಯಾಗಿಬಿಟ್ಟಿದ್ದರು.

ಆದರೆ ತಮ್ಮ ಮಡದಿ ಇನ್ನೆಂದೂ ಮರಳುವುದಿಲ್ಲವೆಂದು ಅರಿತುಕೊಂಡ ತ್ರಿಪಾಠ್‌, ತಮ್ಮ 60ರ ಹರೆಯದಿಂದ ವ್ಯಾಯಾಮ ಮಾಡಲು ಆರಂಭಿಸಿದರು. ಅದರ ಪರಿಣಾಮ ತಮ್ಮ ಇಳಿವಯಸ್ಸಿನಲ್ಲಿ ಸಖತ್‌ ಫಿಟ್ ಆಗಿದ್ದಾರೆ ತ್ರಿಪಾಠ್‌.

https://www.instagram.com/p/CPiaABnhB4t/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...