ನವದೆಹಲಿ: ಬಳಸಿ ಬಿಸಾಡುವ ಪೇಪರ್ ಕಪ್ ಗಳಲ್ಲಿ ಬಿಸಿ ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎಂದು ಹೇಳಲಾಗಿದೆ.
ಪ್ರತಿದಿನ ಪೇಪರ್ ಕಪ್ ಗಳಲ್ಲಿ ಟೀ ಕುಡಿಯುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹ ಸೇರಿಕೊಳ್ಳುತ್ತವೆ ಎನ್ನುವುದು ಖರಗ್ ಪುರ ಐಐಟಿ ನಡೆಸಿದ ಸಂಶೋಧನೆಯಲ್ಲಿ ಗೊತ್ತಾಗಿದೆ. ಪೇಪರ್ ಲೋಟಗಳಲ್ಲಿ ಬಿಸಿ ದ್ರಾವಣ ಹಾಕಿದ ಸಂದರ್ಭದಲ್ಲಿ ಸೂಕ್ಷ್ಮವಾದ ಪ್ಲಾಸ್ಟಿಕ್ ಕಣಗಳು ಮತ್ತು ವಿಷಕಾರಿ ಅಂಶಗಳು ದೇಹ ಪ್ರವೇಶಿಸುವುದು ಸಂಶೋಧನೆಯಲ್ಲಿ ತಿಳಿದುಬಂದಿದೆ.
ಸಾಮಾನ್ಯವಾಗಿ ಪೇಪರ್ ನೋಟಗಳು ತೆಳು ಪ್ಲಾಸ್ಟಿಕ್ ಪದರ ಹೊಂದಿರುತ್ತವೆ. ಅವು ಬಿಸಿ ನೀರಿನಲ್ಲಿ ಕರಗುತ್ತವೆ. ಖರಗ್ ಪುರ ಐಐಟಿ ಸಹಾಯಕ ಪ್ರಾಧ್ಯಾಪಕಿ ಸುಧಾ ಗೊಯಲ್ ಈ ಬಗ್ಗೆ ಮಾತನಾಡಿ, 100 ಎಂಎಲ್ ಬಿಸಿನೀರನ್ನು ಪೇಪರ್ ಲೋಟಗಳಲ್ಲಿ 15 ನಿಮಿಷಗಳ ಕಾಲ ಇಟ್ಟರೆ 25,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಬಿಡುಗಡೆಯಾಗಿರುವುದು ಗೊತ್ತಾಗಿದೆ. ಪೇಪರ್ ಕಪ್ ನಲ್ಲಿ ಚಹಾ ಸೇವಿಸುವುದರಿಂದ ದೇಹಕ್ಕೆ ಪ್ಲಾಸ್ಟಿಕ್ ಕಣಗಳು ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.