ಈಗ ಎಲ್ಲೆಡೆ ಚಹಾ ನೀಡಲು ಪೇಪರ್ ಕಪ್ ಬಳಕೆ ಸಾಮಾನ್ಯವಾಗಿದೆ. ಆದರೆ, ಈ ಕಪ್‌ಗಳು ಕೂಡ ಮಾನವನ ಜೀವಕ್ಕೆ ಸುರಕ್ಷಿತವಲ್ಲ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಖರಗ್ಪುರ ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರ ತಂಡ ಈ ಸಂಶೋಧನೆ ನಡೆಸಿದೆ. ಈ ಪೇಪರ್ ಕಪ್‌ಗಳಿಗೆ ಪಾಲಿಥಿನ್‌ನಿಂದ ಅಥವಾ ಕೋ ಪಾಲಿಮರ್‌ನಿಂದ ಮಾಡಿರುವ ಹೈಡ್ರೊಫೋಬಿಕ್ ಫಿಲ್ಮ್‌ಗಳನ್ನು ಬಳಸಲಾಗುತ್ತದೆ.
15 ನಿಮಿಷ ಈ ಕಪ್‌ನಲ್ಲಿ 85 ರಿಂದ 90 ಡಿಗ್ರಿ ಉಷ್ಣಾಂಶದ ಬಿಸಿ ವಸ್ತುವನ್ನು ಹಾಕಿಟ್ಟಲ್ಲಿ ಮೇಲಿನ ಸಣ್ಣ ಲೇಯರ್ ಕರಗಿ ಹೋಗುತ್ತದೆ. 25 ಸಾವಿರ ಮೈಕ್ರಾನ್ ದಪ್ಪದ ಮೈಕ್ರೊಪ್ಲಾಸ್ಟಿಕ್ ಕಣಗಳು 100 ಎಂಎಲ್‌ನಷ್ಟು ದ್ರವ ಪದಾರ್ಥವನ್ನು ಬಿಡುಗಡೆ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಒಬ್ಬ ಮನುಷ್ಯ ಒಂದು ದಿನಕ್ಕೆ ಮೂರು ಪೇಪರ್ ಕಪ್ ಚಹಾ ಕುಡಿದ ಎಂದಾದಲ್ಲಿ ಆತನ ದೇಹಕ್ಕೆ ಅತಿ ಸಣ್ಣದಾದ 75 ಸಾವಿರ ಮೈಕ್ರೊಪ್ಲಾಸ್ಟಿಕ್ ಪಾರ್ಟಿಕಲ್‌ಗಳು ಹೋಗುತ್ತವೆ. ಇದು ಆತನ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಸಂಶೋಧನೆಯಿಂದ ಖಚಿತವಾಗಿದೆ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಖರಗ್ಪುರ ಐಐಟಿಯ ಅಸೋಸಿಯೇಟ್ ಪ್ರೊಫೆಸರ್ ಸುಧಾ ಗೋಯಲ್ ಹೇಳುತ್ತಾರೆ.