alex Certify ಮೂರೇ ವಾರಗಳಲ್ಲಿ ನಿರ್ಮಾಣವಾಗುತ್ತೆ ಪೋರ್ಟಬಲ್‌ ಆಸ್ಪತ್ರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರೇ ವಾರಗಳಲ್ಲಿ ನಿರ್ಮಾಣವಾಗುತ್ತೆ ಪೋರ್ಟಬಲ್‌ ಆಸ್ಪತ್ರೆ…!

ಕೋವಿಡ್ ವಿಪತ್ತಿನ ಘಳಿಗೆಗಳನ್ನು ಎದುರಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಆಡಳಿತಗಳು ಸಾಕಷ್ಟು ತಿಣುಕಾಡುತ್ತಿವೆ.

ಈ ಹಂತದಲ್ಲಿ ಆಸ್ಪತ್ರೆಗಳ ವಿಸ್ತರಣೆ ಯೋಜನೆಗೆ ಕೇಂದ್ರ ಸರ್ಕಾರ ಕೈಹಾಕಿದ್ದು, ಇದಕ್ಕೆ ನೆರವಾಗಲು ಖಾಸಗಿ ಕ್ಷೇತ್ರ, ದೇಣಿಗೆ ಸಂಸ್ಥೆಗಳು ಹಾಗೂ ವ್ಯಕ್ತಿಗತವಾಗಿ ಮುಂದೆ ಬರಲು ಆಹ್ವಾನ ನೀಡಿದೆ.

ಕೋವಿಡ್-19 ಪ್ರಕರಣಗಳು ಅತಿ ಹೆಚ್ಚಾಗಿ ಕಂಡು ಬರುವ ರಾಜ್ಯಗಳಲ್ಲಿ 50ರಷ್ಟು ಆಸ್ಪತ್ರೆಗಳ ತುರ್ತು ಅಗತ್ಯವಿದೆ ಎಂದು ಭಾರತದ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರು ತಿಳಿಸಿದ್ದಾರೆ.

ಜನಸಾಮಾನ್ಯರಿಗೆ ಕೇಂದ್ರದಿಂದ ಬಿಗ್ ಶಾಕ್: ಶತಕ ಬಾರಿಸಿದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯವಿಲ್ಲ ಎಂದ್ರು ಧರ್ಮೇಂದ್ರ ಪ್ರಧಾನ್

ಅದಾಗಲೇ ಚಾಲ್ತಿಯಲ್ಲಿರುವ ಆಸ್ಪತ್ರೆಯೊಂದರ ಕಟ್ಟಡಕ್ಕೆ ಹೊಂದಿಕೊಂಡಂತೆಯೇ ತಾತ್ಕಾಲಿಕವಾದ ವಿಸ್ತರಣಾ ಕಟ್ಟಡ ನಿರ್ಮಿಸುವ ’ಮೆಡಿಕ್ಯಾಬ್’ ಆಸ್ಪತ್ರೆಗಳನ್ನು ಐಐಟಿ-ಮದ್ರಾಸ್‌‌ನಲ್ಲಿ ಆರಂಭಗೊಂಡ ’ಮಾಡ್ಯುಲಸ್ ಹೌಸಿಂಗ್‌’ ಸ್ಟಾರ್ಟ್-ಅಪ್ ಅಭಿವೃದ್ಧಿಪಡಿಸಿದೆ.

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಮಾರ್ಗಸೂಚಿ ಬಿಡುಗಡೆ ಸಾಧ್ಯತೆ

100 ಹಾಸಿಗೆಗಳ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆಗಳನ್ನು ಮೂರೇ ವಾರಗಳ ಅವಧಿಯಲ್ಲಿ ನಿರ್ಮಾಣ ಮಾಡುವ ಈ ತಂತ್ರಜ್ಞಾನದ ಮೂಲಕ ತೀವ್ರ ನಿಗಾ ಘಟಕಗಳ ಹೊಸ ವಲಯಗಳನ್ನೇ ಸೃಷ್ಟಿಸಬಹುದಾಗಿದೆ. ಜೀವ ರಕ್ಷಕ ಸಾಧನಗಳು ಸೇರಿದಂತೆ ಅನೇಕ ವೈದ್ಯಕೀಯ ಉಪಕರಣಗಳನ್ನು ಇಟ್ಟುಕೊಳ್ಳಲು ನೆರವಾಗುವ ಈ ’ಮೆಡಿಕ್ಯಾಬ್‌’ಗಳೆಂಬ ಪೋರ್ಟಬಲ್ ಆಸ್ಪತ್ರೆಗಳು 25 ವರ್ಷಗಳ ಕಾಲ ಬಾಳಿಕೆ ಬರಬಲ್ಲವಾಗಿವೆ.

ವಿಪತ್ತು ಘಟಿಸುವ ಸ್ಥಳಗಳಿಗೆ ಈ ಮೊಬೈಲ್ ಆಸ್ಪತ್ರೆಗಳನ್ನು ಒಂದೇ ವಾರದಲ್ಲಿ ಸ್ಥಳಾಂತರಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...