ಹತ್ತಿಯ ಬಟ್ಟೆಯನ್ನು ಮಾರ್ಪಡಿಸಿ ದಿಲ್ಲಿಯ ಐಐಟಿ ಸಂಶೋಧಕರು ಝಿಫ್-8@ಸಿಎಂ ಕಾಟನ್ ಹಾಗೂ ಝಿಫ್-67@ಸಿಎಂ ಕಾಟನ್ ಹೆಸರಿನ ವಿಶಿಷ್ಟ ಬಟ್ಟೆಗಳನ್ನು ಸಿದ್ಧಪಡಿಸಿದ್ದಾರೆ. ಮನೆಯ ಒಳಗೆ ಮತ್ತು ಹೊರಗಡೆ ಗಾಳಿಯಲ್ಲಿರುವ ಬೆನ್‍ಜೀನ್, ಅನಿಲೀನ್ ಮತ್ತು ಸ್ಟಿರೀನ್ ಎಂಬ ಮಾಲಿನ್ಯದ ಅಂಶಗಳನ್ನು ಈ ಬಟ್ಟೆಯು ತಾನಾಗಿಯೇ ಹೀರಿಕೊಳ್ಳುವ ಸಾಮಥ್ರ್ಯ ಹೊಂದಿದೆ. ಈ ಮೂಲಕ ಬಟ್ಟೆ ಧರಿಸಿದವರ ಸುತ್ತಲಿನ ವಾತಾವರಣ ಮಾಲಿನ್ಯದಿಂದ ಮುಕ್ತವಾಗಿರುತ್ತದೆ.
ಟೆಕ್ಸ್‍ಟೈಲ್ ಮತ್ತು ಫೈಬರ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಅಶ್ವಿನಿ ಅಗರ್‍ವಾಲ್ ಅವರ ನೇತೃತ್ವದಲ್ಲಿ ಸಂಶೋಧಕರ ತಂಡವು ಈ ವಿಶಿಷ್ಟ ಬಟ್ಟೆಯನ್ನು ಅಭಿವೃದ್ಧಿಪಡಿಸಿದೆ. ಮನೆಗಳು, ಕಚೇರಿಗಳು, ಚಿತ್ರಮಂದಿರಗಳು, ವಿಮಾನಗಳಲ್ಲಿ ಈ ಬಟ್ಟೆಗಳನ್ನು ಹೆಚ್ಚಾಗಿ ಬಳಸುವುದರಿಂದ ಮಾಲಿನ್ಯದಿಂದ ಮುಕ್ತವಾದ ಉತ್ತಮ ಗಾಳಿಯನ್ನು ಜನರು ಸೇವಿಸಲು ಅನುಕೂಲವಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
SHOCKING NEWS: ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ
ವಿಶೇಷವೆಂದರೆ, ಹಾಳಾದ ಅಥವಾ ಹಳೆಯದಾದ ಬಳಿಕವೂ ಈ ಬಟ್ಟೆಗಳನ್ನು 120 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸುಡುವ ವಿಶೇಷ ಪ್ರಕ್ರಿಯೆ ಮೂಲಕ ಪುನರ್ ಉತ್ಪಾದನೆ ಕೂಡ ಮಾಡಬಹುದಾಗಿದೆ.