ಕೇವಲ 90 ನಿಮಿಷಗಳಲ್ಲಿ ಒಮಿಕ್ರಾನ್ ಪತ್ತೆ ಮಾಡಬಲ್ಲ ಆರ್‌ಟಿ-ಪಿಸಿಆರ್ ಮಾದರಿಯನ್ನು ಭಾರತೀಯ ತಾಂತ್ರಿಕ ಸಂಸ್ಥೆ-ದೆಹಲಿ ಅಭಿವೃದ್ಧಿ ಪಡಿಸಿದೆ. ಐಐಟಿಯ ಕುಸುಮಾ ಜೀವವಿಜ್ಞಾನ ಶಾಲೆಯಲ್ಲಿ ಅಭಿವೃದ್ಧಿಪಡಿಸಲಾದ ಈ ಆರ್‌ಟಿ-ಪಿಸಿಆರ್ ಆಧರಿತ ಪರೀಕ್ಷೆಯಲ್ಲಿ ಸಾರ್ಸ್-ಕೋವಿ-2ನ ಒಮಿಕ್ರಾನ್ (B.1.1.529.1) ಮಾದರಿಯನ್ನು ಪತ್ತೆ ಮಾಡಬಹುದಾಗಿದೆ.
ಸದ್ಯ, ಸೀಕ್ವೆನ್ಸಿಂಗ್ ಆಧರಿತ ಪರೀಕ್ಷೆಯೊಂದರಲ್ಲಿ ಒಮಿಕ್‌ಆನ್ ಪತ್ತೆಯ ಪರೀಕ್ಷೆ ಮಾಡಲಾಗುತ್ತಿದ್ದು, ಫಲಿತಾಂಶಕ್ಕಾಗಿ ಮೂರು ದಿನಗಳು ಕಾಯಬೇಕಾಗುತ್ತದೆ. ಆದರೆ ಐಐಟಿಯ ಈ ಮಾದರಿ ಮೂಲಕ ಬರೀ ಒಂದೂವರೆ ಗಂಟೆಗಳಲ್ಲಿ ಫಲಿತಾಂಶ ಬರಲಿದೆ.
BIG BREAKING: ಒಮಿಕ್ರಾನ್ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?
ಒಮಿಕ್ರಾನ್‌ನಲ್ಲಿ ಕಂಡು ಬರುವ ನಿರ್ದಿಷ್ಟ ಮ್ಯುಟೇಶನ್‌ಗಳನ್ನು (ರೂಪಾಂತರ) ಪತ್ತೆ ಮಾಡುವ ಮೂಲಕ ಕೋವಿಡ್‌ನ ಹೊಸ ಮಾದರಿ ಸೋಂಕಿನ ಪತ್ತೆ ಮಾಡಲಾಗುತ್ತದೆ. ಡಿಎನ್‌ಎ ಚೂರುಗಳ ಮುಖಾಂತರ, ಎಸ್ ವಂಶವಾಹಿಯಲ್ಲಿ ಕಂಡುಬರುವ ರೂಪಾಂತರವನ್ನು ಗುರುತಿಸಲು ಮಾಡಲಾದ ಈ ಪರೀಕ್ಷೆಗಳಲ್ಲಿ ಒಮಿಕ್ರಾನ್ ತಳಿಯ ನಿರ್ದಿಷ್ಟ ಲಕ್ಷಣಗಳಿಗಾಗಿ ಶೋಧ ನಡೆಯುತ್ತದೆ.
ತಾನು ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನಕ್ಕೆ ಭಾರತೀಯ ಪೇಟೆಂಟ್ ಕೋರಿ ಐಐಟಿ ಅರ್ಜಿ ಸಲ್ಲಿಸಿದೆ.