ದೇಶಕ್ಕೆ ದೊಡ್ಡ ದೊಡ್ಡ ತಂತ್ರಜ್ಞರನ್ನು ಕೊಡುಗೆ ನೀಡಿದ ಬಾಂಬೆ ಐಐಟಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ವಿಶೇಷ ಕಾರಣಕ್ಕೆ ಟ್ರೋಲ್ ಆಗಿದೆ.
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ತ್ರಿವರ್ಣ ಧ್ವಜ ಬಳಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನ ಪ್ರಕಟಿಸಿದ್ದು ಸಾಮಾನ್ಯ. ಅದೇ ರೀತಿ ಐಐಟಿ ಬಾಂಬೆ ಕೂಡ ಪ್ರಯತ್ನ ಮಾಡಿತ್ತು. ಆಗಸ್ಟ್ 8ರಂದು ಫೇಸ್ಬುಕ್ನಲ್ಲಿ ಅದರ ಕಟ್ಟಡದ ಫೋಟೋವನ್ನು ಹಂಚಿಕೊಂಡಿದೆ.
ಕಟ್ಟಡದ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ಎಡಿಟ್ ಮಾಡಲಾದ ಧ್ವಜವನ್ನು ಬಳಸಲಾಗಿತ್ತು. ಈ ಫೋಟೋವನ್ನು ಸಂಸ್ಥೆಯ ಪೇಜ್ನ ಕವರ್ ಚಿತ್ರವಾಗಿ ಪ್ರಕಟಿಸಲಾಗಿದೆ.
ಇದು ಸಮಾಷೆಗೆ ಕಾರಣವಾಯಿತು. ಅನೇಕರು ವ್ಯಂಗ್ಯ ಮಾಡಿ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಕವರ್ ಫೋಟೋದಲ್ಲಿ ನೀವು ರಾಷ್ಟ್ರಧ್ವಜವನ್ನು ಹಾಕದಿದ್ದರೂ ಪರವಾಗಿಲ್ಲ, ಆದರೆ ನೀವು ದೇಶಭಕ್ತರೆಂದು ತೋರಿಸಲು ಈ ಎಡಿಟ್ ಮಾಡಿದ ಫೋಟೋ ನಕಲಿಯಾಗಿದೆ. ನನ್ನ ವಿಶ್ವವಿದ್ಯಾನಿಲಯದಿಂದ ಇದನ್ನು ನೋಡಿ ಬೇಸರವಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಯು ನಮ್ಮ ರಾಷ್ಟ್ರಧ್ವಜವನ್ನು ಫೋಟೋಶಾಪ್ ಮಾಡಬೇಕೇ ? ಎಂದು ಇನ್ನೊಬ್ಬರು ಕೇಳಿದ್ದಾರೆ. ಈಗ ಮುಂಬೈನಲ್ಲಿ ಭೂಮಿಯ ಬೆಲೆ ಎಷ್ಟು ದುಬಾರಿಯಾಗಿದೆ ಎಂದು ಎಲ್ಲರಿಗೂ ತಿಳಿದಿದೆ, ಅವರು ಧ್ವಜಕ್ಕಾಗಿ ಭೂಮಿಯನ್ನು ಹೊಂದಲು ಪಡೆಯಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದರೆ, ಮತ್ತೊಬ್ಬರು ಸ್ನ್ಯಾಪ್ಚಾಟ್ ಫಿಲ್ಟರ್ ಬಳಸಿ ಧ್ವಜವನ್ನು ತಯಾರಿಸಲಾಗಿದೆಯೇ ಎಂದು ಕೆಣಕಿದ್ದಾರೆ.