ಬೆಂಗಳೂರು: ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಐ.ಐ.ಎಸ್.ಸಿ. ತಜ್ಞರು ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ. ಮೂರನೆಯ ಅಲೆಯಲ್ಲಿ ಕೊರೋನಾ ಸೋಂಕು ಅಬ್ಬರಿಸಿ ಬೊಬ್ಬಿರಿಯಲಿದೆ ಎಂದು ಹೇಳಿದ್ದಾರೆ.
ಮಾರಕ ಕೊರೋನಾ ವೈರಸ್ ಗೆ ಮಕ್ಕಳೇ ಟಾರ್ಗೆಟ್ ಆಗಿದ್ದಾರೆ. ಕೊರೋನಾ ಮೂರನೇ ಅಲೆ ಮಕ್ಕಳಿಗೆ ಗಂಡಾಂತರ ಉಂಟು ಮಾಡಲಿದೆ ಎನ್ನುವುದು ತಜ್ಞರ ಅಧ್ಯಯನದಲ್ಲಿ ಗೊತ್ತಾಗಿದೆ. ಮೂರನೇ ಅಲೆ ಬಂದರೆ ಮಕ್ಕಳಲ್ಲಿ 7 ಪಟ್ಟು ಸೋಂಕು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವ್ಯಾಕ್ಸಿನ್ ಹಾಕಿರದ ಹಿನ್ನೆಲೆಯಲ್ಲಿ ಮಕ್ಕಳೇ ಟಾರ್ಗೆಟ್ ಆಗಲಿದ್ದಾರೆ. ಕೊರೊನಾ ಸೋಂಕು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ ಮೂರನೇ ಅಪ್ಪಳಿಸಿದರೆ ಮಕ್ಕಳಿಗೆ ಗಂಡಾಂತರ ಎಂದು ಎಚ್ಚರಿಕೆ ನೀಡಲಾಗಿದೆ. 0- 18 ವರ್ಷ ವಯಸ್ಸಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ 0 -19 ವರ್ಷದವರಲ್ಲಿ ಎರಡೂವರೆ ಪಟ್ಟು ಸೋಂಕು ಹೆಚ್ಚಾಗಿತ್ತು. ಮೂರನೇ ಅಲೆಯಲ್ಲಿ 7 ಪಟ್ಟು ಹೆಚ್ಚಲಿದೆ. 0 -9 ವರ್ಷದವರಿಗೆ ಮೊದಲ ಅಲೆಯಲ್ಲಿ 27,674 ಮಕ್ಕಳಿಗೆ ಸೋಂಕು ತಗುಲಿದ್ದು, 2 ನೇ ಅಲೆಯಲ್ಲಿ 64,637 ಮಕ್ಕಳು ಸೋಂಕಿಗೆ ತುತ್ತಾಗಿದ್ದರು. 10 -19 ವರ್ಷದವರಿಗೆ ಮೊದಲ ಅಲೆಯಲ್ಲಿ 64,806 ಮಕ್ಕಳಿಗೆ 2 ನೇ ಅಲೆಯಲ್ಲಿ 1,63,566 ಮಕ್ಕಳಿಗೆ ಸೋಂಕು ತಗುಲಿದೆ.