alex Certify IIFA 2023: ಅತ್ಯುತ್ತಮ ನಟಿ – ಆಲಿಯಾ ಭಟ್, ಅತ್ಯುತ್ತಮ ನಟ – ಹೃತಿಕ್ ರೋಷನ್; ಇಲ್ಲಿದೆ ಪ್ರಶಸ್ತಿ ವಿಜೇತರ ಕಂಪ್ಲೀಟ್‌ ಲಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IIFA 2023: ಅತ್ಯುತ್ತಮ ನಟಿ – ಆಲಿಯಾ ಭಟ್, ಅತ್ಯುತ್ತಮ ನಟ – ಹೃತಿಕ್ ರೋಷನ್; ಇಲ್ಲಿದೆ ಪ್ರಶಸ್ತಿ ವಿಜೇತರ ಕಂಪ್ಲೀಟ್‌ ಲಿಸ್ಟ್

IIFA ಎಂದು ಜನಪ್ರಿಯವಾಗಿರುವ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಪ್ರದಾನವಾಗಿದ್ದು ಆಲಿಯಾ ಭಟ್ ನಟನೆಯ ʼಗಂಗೂಬಾಯಿ ಕಾಥಿಯಾವಾಡಿʼ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

IIFA 23 ನೇ ಆವೃತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ರಾತ್ರಿ ಅಬುಧಾಬಿಯಲ್ಲಿ ನಡೆಯಿತು. ಬ್ರಹ್ಮಾಸ್ತ್ರ, ಗಂಗೂಬಾಯಿ ಕಾಥಿಯಾವಾಡಿ ಮತ್ತು ದೃಶ್ಯಂ 2 ಚಲನಚಿತ್ರಗಳು ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.

ವಿಕ್ರಮ್ ವೇದಾ ಚಿತ್ರದ ಅಭಿನಯಕ್ಕಾಗಿ ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಗಂಗೂಬಾಯಿ ಕಾಥಿಯಾವಾಡಿ ಚಿತ್ರಕ್ಕಾಗಿ ಅಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

ಅರಿಜಿತ್ ಸಿಂಗ್‌ಗೆ ಅತ್ಯುತ್ತಮ ಗಾಯಕ, ಶ್ರೇಯಾ ಘೋಷಾಲ್‌ಗೆ ಅತ್ಯುತ್ತಮ ಗಾಯಕಿ ಮತ್ತು ಪ್ರೀತಮ್‌ಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.

ನಟ ಆರ್ ಮಾಧವನ್ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಹಿರಿಯ ನಟ ಕಮಲ್ ಹಾಸನ್ ಅವರಿಗೆ ಭಾರತೀಯ ಚಿತ್ರರಂಗದಲ್ಲಿನ ಸಾಧನೆಗಾಗಿ ಪ್ರಶಸ್ತಿ ಗೌರವ ನೀಡಲಾಗಿದೆ. ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ಪ್ರಶಸ್ತಿ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಚಿತ್ರ: ದೃಶ್ಯಂ 2

ಅತ್ಯುತ್ತಮ ನಿರ್ದೇಶಕ: ಆರ್ ಮಾಧವನ್- ರಾಕೆಟ್ರಿ: ದಿ ನಂಬಿ ಎಫೆಕ್ಟ್‌

ಅತ್ಯುತ್ತಮ ನಟಿ: ಆಲಿಯಾ ಭಟ್- ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ನಟ : ಹೃತಿಕ್ ರೋಷನ್- ವಿಕ್ರಮ್ ವೇದ

ಅತ್ಯುತ್ತಮ ಪೋಷಕ ನಟಿ : ಮೌನಿ ರಾಯ್: ಬ್ರಹ್ಮಾಸ್ತ್ರ

ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್- ಜಗ್ ಜಗ್ ಜೀಯೋ

ಸಿನಿಮಾದಲ್ಲಿ ಅತ್ಯುತ್ತಮ ಫ್ಯಾಷನ್ ಡಿಸೈನಿಂಗ್ ನಲ್ಲಿ ಸಾಧನೆ: ಮನೀಶ್ ಮಲ್ಹೋತ್ರಾ

ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ: ಕಮಲ್ ಹಾಸನ್

ಅತ್ಯುತ್ತಮ ಹೊಸ ನಟ: ಶಾಂತನು ಮಹೇಶ್ವರಿ- ಗಂಗೂಬಾಯಿ ಕಾಥಿಯಾವಾಡಿ ಮತ್ತು ಬಬಿಲ್ ಖಾನ್ ( ಕಲಾ)

ಅತ್ಯುತ್ತಮ ಹೊಸ ನಟಿ: ಖುಶಾಲಿ ಕುಮಾರ್ – ಧೋಕಾ ಅರೌಂಡ್ ದಿ ಕಾರ್ನರ್‌

ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರೇಯಾ ಘೋಷಾಲ್- ಬ್ರಹ್ಮಾಸ್ತ್ರ (ರಸಿಯಾ)

ಅತ್ಯುತ್ತಮ ಹಿನ್ನೆಲೆ ಗಾಯಕ: ಅರಿಜಿತ್ ಸಿಂಗ್- ಬ್ರಹ್ಮಾಸ್ತ್ರದ (ಕೇಸರಿಯಾ)

ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಮ್ – ಬ್ರಹ್ಮಾಸ್ತ್ರ

ಅತ್ಯುತ್ತಮ ಗೀತರಚನೆಕಾರ: ಅಮಿತಾಭ್ ಭಟ್ಟಾಚಾರ್ಯ -ಬ್ರಹ್ಮಾಸ್ತ್ರ ( ಕೇಸರಿಯಾ)

ಅತ್ಯುತ್ತಮ ಛಾಯಾಗ್ರಹಣ: ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ಚಿತ್ರಕಥೆ: ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಥಿಯಾವಾಡಿ

ಅತ್ಯುತ್ತಮ ಸಂಕಲನ: ದೃಶ್ಯಂ 2

ಅತ್ಯುತ್ತಮ ಹಿನ್ನೆಲೆ ಸಂಗೀತ: ವಿಕ್ರಮ್ ವೇದಾ

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...