alex Certify `ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ’ : ನೋಂದಣಿಗೆ ನಾಳೆ ಕೊನೆ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ’ : ನೋಂದಣಿಗೆ ನಾಳೆ ಕೊನೆ ದಿನ

ಬೆಂಗಳೂರು : ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೆರವಾಗಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಎರಡನೇ ಬಾರಿಗೆ ವಿಶೇಷ ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ನೋಂದಣಿ ದಿನಾಂಕವನ್ನು ಆಗಸ್ಟ್ 12 ರವರೆಗೆ ವಿಸ್ತರಿಸಲಾಗಿದೆ.

2022-23ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಹಿಂದಿನ ಸಾಲುಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗೆ ನೋಂದಾಯಿಸಲು ಅರ್ಹರಾಗಿರುತ್ತಾರೆ. ಫಲಿತಾಂಶ ತಿರಸ್ಕರಿಸಲು ಸದರಿ ಪರೀಕ್ಷೆಯಲ್ಲಿ ಅವಕಾಶವಿರುವುದಿಲ್ಲ. ಪರೀಕ್ಷೆ ಸಂಬಂಧಿಸಿದ ಸುತ್ತೋಲೆ ಹಾಗೂ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ https://kseab.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಈ ಅವಕಾಶವನ್ನು ಅರ್ಹ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಲು ತಿಳಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ಹೊರಡಿಸಿದೆ.

ಆಗಸ್ಟ್ 21 ರಿಂದ ಸೆಪ್ಟಂಬರ್ 2 ರವರೆಗೆ ಪರೀಕ್ಷೆಗಳು ಜರುಗಲಿದ್ದು, ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಆಗಸ್ಟ್ 12 ರೊಳಗಾಗಿ ಕಾಲೇಜು ಲಾಗಿನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸುವ ಮೂಲಕ ನೊಂದಣಿ ಮಾಡಿಕೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಪೂರಕ ಪರೀಕ್ಷೆ -2 ವೇಳಾಪಟ್ಟಿ
21-08-2೦23- ಸೋಮವಾರ- ಕನ್ನಡ ಹಾಗೂ ಅರೇಬಿಕ್
22-08-23- ಮಂಗಳವಾರ ಐಚ್ಛಿಕ ಕನ್ಬಡ, ರಾಸಾಯನ, ಮೂಲಗಣಿತ
23-08-23- ಬುಧವಾರ- ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
24-08-23- ಗುರುವಾರ- ತರ್ಕ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ವ್ಯಾವಹಾರ ಅಧ್ಯಯನ
25-08-23- ಶರವಾರ- ಇತಿಹಾಸ, ಸಂಖ್ಯಾಶಾಸ್ತ್ರ
26-08-23 ಇಂಗ್ಲಿಷ್
28-08-23- ಭೂಗೋಳಶಾಸದರತ, ಮನಃ ಶಾಸ್ತ್ರ, ಭೌತಶಾಸ್ತ್ರ
29-08-23- ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ಶಾಸ್ತ್ರ
30-08-23 – ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ
21-08-23- ಹಿಂದಿ
01-09-2023 – ಅರ್ಥ ಶಾಸ್ತ್ರ, ಜೀವಶಾಸ್ತ್

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...