![](https://kannadadunia.com/wp-content/uploads/2023/03/karnataka-2nd-puc-1611919452-1622787904.jpg)
ಬೆಂಗಳೂರು : 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ಕ್ಕೆ ಸಂಬಂಧಿಸಿದಂತೆ, ಫ್ರೆಂಚ್ ವಿಷಯದ ಪರೀಕ್ಷೆಗಳಲ್ಲಿ ಅನುಸರಿಸಬೇಕಾದ ಪರೀಕ್ಷಾ ಪದ್ಧತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
2024ರ ದ್ವಿತೀಯ ಪಿಯುಸಿ ಪರೀಕ್ಷೆ-01ಕ್ಕೆ ಸಂಬಂಧಿಸಿದಂತೆ, ಫ್ರೆಂಚ್ ವಿಷಯದ ಕುರಿತು, ಈ ಕೆಳಕಂಡ ಸೂಚನೆಗಳ ಪ್ರಕಾರ ಕಡ್ಡಾಯವಾಗಿ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಿದೆ.
- 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ಕ್ಕೆ Regular ವಿದ್ಯಾರ್ಥಿಗಳಿಗೆ ಫ್ರೆಂಚ್ ವಿಷಯದಲ್ಲಿ ಮೌಖಿಕ ಪರೀಕ್ಷೆಯ ಬದಲು ಆಂತರಿಕ ಮೌಲ್ಯಮಾಪನ 20 ಅಂಕಗಳಿಗೆ ನಡೆಯುತ್ತದೆ ಹಾಗೂ Regular ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಸ್ಯಾಟ್ಸ್ ಮುಖಾಂತರ Online ನಲ್ಲಿ ನಮೂದಿಸುವ ಬಗ್ಗೆ, ಸುತ್ತೋಲೆ ಸಂಖ್ಯೆ : ಕಶಾಪಮೌನಿಮಂ:ಮಾವಮಾ4:ದ್ವಿಪಿಯುಸಿ.ಪ್ರಾ.ಪ-2023- 24ರ ಪತ್ರ ದಿನಾಂಕ : 23.12.2023ರ ಕ್ರಮ ಸಂಖ್ಯೆ 32ರಲ್ಲಿ ಈಗಾಗಲೇ ತಿಳಿಸಲಾಗಿರುತ್ತದೆ. ಸದರಿ ಸುತ್ತೋಲೆಯಂತೆ ಕ್ರಮವಹಿಸಲು ಸೂಚಿಸಿದೆ.
- 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ಕ್ಕೆ ಫ್ರೆಂಚ್ ವಿಷಯದಲ್ಲಿ ನೊಂದಾಯಿಸಿಕೊಂಡಿರುವ ಪುನರಾವರ್ತಿತ (Repeaters) ವಿದ್ಯಾರ್ಥಿಗಳಿಗೆ ಮಾತ್ರ ಈ ಹಿಂದಿನ ವರ್ಷಗಳ ಪರೀಕ್ಷೆಗಳಲ್ಲಿ ನಡೆಸಲಾಗುತ್ತಿದ್ದಂತಹ, ಮಾಖಿಕ ಪರೀಕ್ಷೆಯು ಪ್ರಸ್ತುತ 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ರಲ್ಲಿ ಇರುವುದಿಲ್ಲ. ಈ ಪುನರಾವರ್ತಿತ ವಿದ್ಯಾರ್ಥಿಗಳಿಗೆ, 2024ರ ದ್ವಿತೀಯ ಪಿಯುಸಿ ಪರೀಕ್ಷೆ-01ರಲ್ಲಿ, 80 ಅಂಕಗಳ ತಾತ್ವಿಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು 100 ಅಂಕಗಳಿಗೆ ಪರಿವರ್ತಿಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು. ಪುನರಾವರ್ತಿತ ವಿದ್ಯಾರ್ಥಿಗಳು ತಾತ್ವಿಕ ಪರೀಕ್ಷೆಯನ್ನು ಮಾತ್ರ ಬರೆಯುವುದು ಎಂಬ ಅಂಶವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರುಗಳು ಫ್ರೆಂಚ್ ವಿಷಯದ ಪುನರಾವರ್ತಿತ ವಿದ್ಯಾರ್ಥಿಗಳಿಗೆ ತಿಳಿಸಲು ಸೂಚಿಸಿದೆ.
![](https://kannadadunia.com/wp-content/uploads/2024/02/WhatsApp-Image-2024-02-02-at-6.07.49-PM.jpeg)