![](https://kannadadunia.com/wp-content/uploads/2023/03/exam-second-puc.jpg)
ಬೆಂಗಳೂರು : ಮಾರ್ಚ್ 2024ರ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಾಲತಾಣ www.kseab.karnataka.gov.in ನಲ್ಲಿ ನೀಡಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ಮಾರ್ಚ್ 2024ರ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಜಾಲತಾಣ www.kseab.karnataka.gov.in & PU EXAM PORTAL LOGIN ನಲ್ಲಿ ನೀಡಲಾಗಿರುತ್ತದೆ, ಕರಡು ಪ್ರವೇಶ ಪತ್ರವನ್ನು ಪ್ರಾಂಶುಪಾಲರು ಡೌನ್ ಲೋಡ್ ಮಾಡಿಕೊಂಡು, ಕರಡು ಪ್ರವೇಶ ಪತ್ರಗಳಲ್ಲಿ ನೀಡಲಾಗಿರುವ ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು ಖುದ್ದಾಗಿ ಪರಿಶೀಲಿಸಲು ಈ ಮೂಲಕ ಸೂಚಿಸಿದೆ. ಕರಡು ಪ್ರವೇಶ ಪತ್ರಗಳಲ್ಲಿ ನೀಡಲಾಗಿರುವ ವಿದ್ಯಾರ್ಥಿಗಳ ಮಾಹಿತಿಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಕಾಲೇಜಿನ ಪ್ರಾಂಶುಪಾಲರು ಪಾಲಿಸಬೇಕಾದ ಕ್ರಮಗಳನ್ನು ಈ ಕೆಳಗಿನಂತೆ ವಿವರಿಸಿದೆ.
- ಕರಡು ಪ್ರವೇಶ ಪತ್ರದ ಪಟ್ಟಿಯಲ್ಲಿ ಯಾವುದೇ ವಿದ್ಯಾರ್ಥಿಯ ಮಾಹಿತಿಯು ನಮೂದಾಗದಿದ್ದಲ್ಲಿ ಅಥವಾ ಮಾಧ್ಯಮ, ವಿಷಯ ತಿದ್ದುಪಡಿ, ಸಂಯೋಜನ ತಿದ್ದುಪಡಿಗಳಿದ್ದಲ್ಲಿ SATSನಲ್ಲಿ ತಿದ್ದುಪಡಿಮಾಡಿದ ನಂತರ ಸೂಕ್ತ ದಾಖಲೆಗಳೊಂದಿಗೆ ( SSLC MARKCARD, I PU RESULT SHEET, SATS CHECKLIST) ಜಿಲ್ಲಾ ಉಪನಿರ್ದೇಶಕರ ಶಿಫಾರಸ್ಸಿನೊಂದಿಗೆ ಮಂಡಲಿಯ ಸಂಬಂಧಿಸಿದ ಜಿಲ್ಲಾ ಶಾಖಾಧಿಕಾರಿಗಳಿಗೆ ದಿನಾಂಕ 30.01.2024ರೊಳಗೆ ನೇರವಾಗಿ ಸಲ್ಲಿಸುವುದು.
- ಕರಡು ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, ತಂದೆ ತಾಯಿಯ ಹೆಸರು ಲಿಂಗ, ವರ್ಗ ತಿದ್ದುಪಡಿಗಳಿದ್ದಲ್ಲಿ SATSನಲ್ಲಿ ತಿದ್ದು ಪಡಿಮಾಡಿದ ನಂತರ ಸೂಕ್ತ ದಾಖಲೆಗಳೊಂದಿಗೆ (SSLC MARKCARD, SATS CHECKLIST) ದಿನಾಂಕ 30.01.2024 ರೊಳಗೆ ನೇರವಾಗಿ ಸಲ್ಲಿಸುವುದು.
- ವಿದ್ಯಾರ್ಥಿಯ ಭಾವಚಿತ್ರದಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ವಿದ್ಯಾರ್ಥಿಯ ಭಾವಚಿತ್ರವನ್ನು ಮತ್ತೊಮ್ಮೆ ಅಪ್ಲೋಡ್ ಮಾಡಲು UPDATE OPTION ಮೂಲಕ ಕಾಲೇಜು ಲಾಗಿನ್ ನಲ್ಲಿ ಪ್ರಾಂಶುಪಾಲರಿಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಯ ಭಾವಚಿತ್ರದ ವ್ಯತ್ಯಾಸ ಸರಿಪಡಿಸಲು ಇದು ಕಡೆಯ ಅವಕಾಶವಾಗಿದ್ದು, ಮುಂದಿನ ದಿನಗಳಲ್ಲಿ ಭಾವಚಿತ್ರ ತಿದ್ದುಪಡಿಗೆ ಯಾವುದೇ ಅವಕಾಶ ನೀಡಲಾಗುವುದಿಲ್ಲ. ಹಾಗೂ ಯಾವುದೇ ವ್ಯತ್ಯಾಸಗಳು ಕಂಡು ಬಂದಲ್ಲಿ ಪ್ರಾಂಶುಪಾಲರೇ ನೇರ ಹೊಣೆಗಾರರಾಗುತ್ತಾರೆ.
![](https://kannadadunia.com/wp-content/uploads/2024/01/WhatsApp-Image-2024-01-21-at-5.03.05-AM.jpeg)
![](https://kannadadunia.com/wp-content/uploads/2024/01/WhatsApp-Image-2024-01-21-at-5.03.06-AM.jpeg)