
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಜಟಾಪಟಿ ಸರ್ವೇ ಸಾಮನ್ಯ ಎನ್ನುವಂತಾಗಿದೆ. ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಇದೀಗ ಮತ್ತೋರ್ವ ಮಹಿಳಾ ಅಧಿಕಾರಿ ದೂರು ನೀಡಿದ್ದಾರೆ.
ಡಿ.ರೂಪಾ ತನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿಗಳನ್ನು ಬಳಸಿಕೊಂಡು ದಾಖಲೆ ಕಳುವು ಮಾಡಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುವ ಸಾಧ್ಯತೆ ಇದೆ ಎಂದು ಡಿಐಜಿ ವರ್ತಿಕಾ ಕಟಿಯಾರ್ ಆರೋಪಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರ್ತಿಕಾ ದೂರು ನೀಡಿದ್ದಾರೆ.
ಡಿ.ರೂಪಾ ಕೆಳಹಂತದ ಮೂವರು ಅಧಿಕಾರಿಗಳನ್ನು ಬಳಸಿ ದಾಖಲೆಗಳನ್ನು ಕಳುವು ಮಾಡಿದ್ದಾರೆ. ವಾಟ್ಸಪ್ ಮೂಲಕ ಫೋಟೋ ತೆಗೆಸಿದ್ದಾರೆ. ಕಂಟ್ರೊಲ್ ರೂಮ್ ನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ. ದುರುದ್ದೇಶದಿಂದ ಫೋಟೋ ತೆಗೆದಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ವರ್ತಿಕಾ ಕಟಿಯಾರ್ ಆರೋಪಿಸಿದ್ದಾರೆ.
ಈ ಹಿಂದೆ ಹಿರಿಯ ಅಧಿಕಾರಿಗಳ ಎದುರಲ್ಲೇ ಸಭೆಯಲ್ಲಿ ಐಎಸ್ ಡಿ ಐಜಿಪಿ ಡಿ.ರೂಪಾ ಹಾಗೂ ಡಿಐಜಿ ವರ್ತಿಕಾ ಕಟಿಯಾರ್ ಗಲಾಟೆ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ದಾಖಲೆ ಕಳುವು ಆರೋಪದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.