
ಹುಲಿ ಮರಿಯು ತನ್ನನ್ನು ತಾನು ರಕ್ಷಿಸಲು ಹೆಣಗಾಡುತ್ತಿದ್ದರೆ, ಕಿಡಿಗೇಡಿಗಳು ಅದರ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದಾರೆ. ಈ ವಿಡಿಯೋ ತನ್ನನ್ನು ಬಹಳ ಸಮಯದಿಂದ ಕಾಡುತ್ತಿದೆ. ನಾವು ಹೇಗೆ ಅನಾಗರಿಕ ಮತ್ತು ಕ್ರೂರವಾಗಿ ವರ್ತಿಸುತ್ತೇವೆ ಎಂದು ಸುಸಾಂತ ನಂದಾ ಬರೆದಿದ್ದಾರೆ.
ಹುಲಿ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಆರೋಪಿಗಳ ಪತ್ತೆಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಮರುಟ್ವೀಟ್ ಮಾಡಿದ್ದಾರೆ.
ಅಪ್‌ಲೋಡ್ ಮಾಡಿದ ನಂತರ, ವಿಡಿಯೋ 56,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಸಂಬಂಧಿತ ಅಧಿಕಾರಿಗಳು/ಪೊಲೀಸರು ಅಂತಹ ಜನರ ಹೆಸರನ್ನು ಸಾಮಾಜಿಕ ಮಾಧ್ಯಮದಲ್ಲಿ ಅವರ ಫೋಟೋಗಳೊಂದಿಗೆ ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವೇ? ಎಂದು ಟ್ವಿಟ್ಟರ್ ನಲ್ಲಿ ಬಳಕೆದಾರರು ಪ್ರಶ್ನಿಸಿದ್ದಾರೆ. ಇದು ಬಹಳ ದುಃಖಕರ ಸಂಗತಿ. ಈ ಬಿಸಿಲಿನ ತಾಪದಲ್ಲಿ ಪ್ರಾಣಿಗಳಿಗೆ ನೀರು ಕೊಡುವ ಬದಲು ಕಲ್ಲುಗಳನ್ನು ಎಸೆದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಅಂತಾ ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.