alex Certify ಕೀಟವಾಗಿ ಪರಿವರ್ತನೆಯಾಗುವ ‘ಕೋಲು’: ವಿಸ್ಮಯಕಾರಿ ವಿಡಿಯೋ ಶೇರ್​ ಮಾಡಿದ ಐಎಫ್​ಎಸ್​ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೀಟವಾಗಿ ಪರಿವರ್ತನೆಯಾಗುವ ‘ಕೋಲು’: ವಿಸ್ಮಯಕಾರಿ ವಿಡಿಯೋ ಶೇರ್​ ಮಾಡಿದ ಐಎಫ್​ಎಸ್​ ಅಧಿಕಾರಿ

ಪ್ರಕೃತಿಯಲ್ಲಿ ಜನರಿಗೆ ತಿಳಿದಿಲ್ಲದ ಅನೇಕ ಜೀವಿಗಳಿವೆ. ಆ ಜೀವಿಗಳನ್ನು ಒಳಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಾ ಅಚ್ಚರಿಗೆ ತಳ್ಳುತ್ತವೆ. ಅಂಥದ್ದೇ ಒಂದು ವಿಸ್ಮಯಕಾರಿ ಕೀಟವೊಂದರ ಕುರಿತು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ವಿಡಿಯೋ ಶೇರ್​ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಒಣಗಿರುವ ಕೋಲೊಂದನ್ನು ನೋಡಬಹುದು. ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ನೋಡಿದಾಗ ಈ ಕೋಲಿನಲ್ಲಿ ಏನು ವಿಶೇಷತೆ ಎಂದು ಎನಿಸದೇ ಇರಲಾರದು. ಆದರೆ ವ್ಯಕ್ತಿಯೊಬ್ಬರು ಆ ಕೋಲನ್ನು ಕೈಯಿಂದ ಅಲ್ಲಾಡಿಸಿದಾಗಲೇ ತಿಳಿಯುವುದು ಅದರ ಅಸಲಿಯತ್ತು!

ಅದು ಕೋಲಲ್ಲ, ಬದಲಿಗೆ ಕೀಟ ಎನ್ನುವ ಅಚ್ಚರಿ ನಂತರ ತಿಳಿಯುತ್ತದೆ. “ನಂಬಲಾಗದ ಮರೆಮಾಚುವಿಕೆ. ಇದು ಅವರದೇ ಆದ ರಕ್ಷಣಾ ಕಾರ್ಯವಿಧಾನವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್​ ಆಗಿದೆ.

ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 53 ಸಾವಿರ ವೀಕ್ಷಣೆಗಳು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ವಿಚಿತ್ರವಾಗಿ ಕಾಣುವ ಕೀಟವನ್ನು ನೋಡಿ ಜನರು ಪುಳಕಿತರಾಗುವುದು ಗ್ಯಾರೆಂಟಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...