ಪ್ರಾಣಿ ಸಾಮ್ರಾಜ್ಯವು ಕೆಲವು ಅತ್ಯಂತ ಮನರಂಜನೆ ಮತ್ತು ಆಕರ್ಷಕ ವಿಷಯವನ್ನು ಒದಗಿಸುತ್ತದೆ. ಅದರಲ್ಲಿಯೂ ಹುಲಿಯ ಪ್ರಪಂಚವೇ ಕುತೂಹಲಕಾರಿಯಾದದ್ದು.
ಇದರ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಹುಲಿ ತನ್ನ ಮರಿಯೊಂದಿಗೆ ಕಾಡಿನ ಸುತ್ತಲೂ ಅಡ್ಡಾಡುವುದನ್ನು ಕಾಣಬಹುದಾಗಿದೆ.
ಹುಲಿ ಮತ್ತು ಅದರ ಮರಿ ರಸ್ತೆಯಲ್ಲಿ ನಡೆಯುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಇದ್ದಕ್ಕಿದ್ದಂತೆ, ಮರಿ ತನ್ನ ತಾಯಿಯ ಹತ್ತಿರ ಬಂದು ಅದರ ಜತೆಗೆ ನಡೆಯಲು ಶುರುಮಾಡುತ್ತದೆ. ಮರಿ ಹತ್ತಿರ ಬಂದಾಗ ಅಮ್ಮ ಹುಲಿ ಅದಕ್ಕೆ ಏನಾಯಿತು ಎಂದು ನೋಡಿ ಮತ್ತೆ ನಡೆಯಲು ಶುರು ಮಾಡುತ್ತದೆ.
ತಾಯಿ-ಮಗುವಿನ ಜೋಡಿ ನಡೆಯುವಾಗ ಭವ್ಯವಾಗಿ ಕಾಣುತ್ತದೆ. ಅವುಗಳ ಸುತ್ತ ಹಸಿರನ್ನೂ ಗಮನಿಸಬಹುದು. ಇದನ್ನು ನೋಡಿದರೆ ಕ್ಯೂಟ್ ವಿಡಿಯೋ ಎಂಬ ಉದ್ಗಾರ ಬರುವುದು ಸಹಜ. ಈ ವೀಡಿಯೋ ಇದೀಗ 62 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.