ಸರ್ಕಾರಿ ಸೇವಾ ಪರೀಕ್ಷೆ ಅತ್ಯಂಟ ಜಟಿಲ ಪರೀಕ್ಷೆಗಳಲ್ಲಿ ಒಂದು. ಈ ಪರೀಕ್ಷಾ ಪ್ರಶ್ನೆ ಪತ್ರಿಕೆಗಳಲ್ಲಿ ಕೊಡಲಾಗಿರುವ ಪ್ರಶ್ನೆಗಳ ಉತ್ತರ ಬರೆಯೋದೇ ಒಂದು ಸವಾಲಾಗಿರುತ್ತೆ. ಅವುಗಳು ಅರ್ಥ ಆಗಬೇಕೆಂದರೆ ಅಷ್ಟೆ ಶ್ರಮಪಟ್ಟು ಓದಿರಬೇಕು. ಆಯಾ ವಿಷಯದ ಬಗ್ಗೆ ಜ್ಞಾನ ಇದ್ದರೆ ಮಾತ್ರ ಅವುಗಳಿಗೆ ಉತ್ತರ ಬರೆಯೋದಕ್ಕೆ ಸಾಧ್ಯ.
ಇತ್ತಿಚೆಗೆ ನಡೆದ ಸರ್ಕಾರಿ ಸೇವಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಯೊಂದನ್ನ ಕೇಳಲಾಗಿದೆ. ಅದು ಟ್ರಿಕ್ಕಿ ಆಗಿದ್ದಂತ ಪ್ರಶ್ನೆ. ಅಂದರೆ ಪ್ರಶ್ನೆ ಓದಿದಾಕ್ಷಣ ಅದು ತುಂಬಾ ಸುಲಭ ಅಂತ ಅನಿಸಿದರೂ ಅದು ತಲೆಗೆ ಕೆಲಸ ಕೊಡಲಾಗಿರುವಂತಹ ಪ್ರಶ್ನೆಯಾಗಿದೆ. ಆ ಪ್ರಶ್ನೆಯನ್ನ ಐಎಫ್ಎಸ್ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಹೇಳಿದ್ದಾರೆ.
2023ರ ಸರ್ಕಾರಿ ಸೇವಾ ಪರೀಕ್ಷೆಯ Q87 ಪ್ರಶ್ನೆ. ಅದು ವನ್ಯಜೀವಿಗಳ ಕುರಿತಾಗಿ ಕೇಳಲಾಗಿರುವ ಪ್ರಶ್ನೆ. ಅದನ್ನ ಓದಿದವರು ಮಾತ್ರ ಉತ್ತರ ಹೇಳಲು ಶಕ್ತರಾಗಿರುತ್ತಾರೆ. ಇದೇ ಪ್ರಶ್ನೆಯ ಫೋಟೋವನ್ನ ಕಸ್ವಾನ್ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ, ಅದಕ್ಕೆ “2023 ರ ನಾಗರಿಕ ಸೇವೆಯ Q87. ನೀವು ಏನು ಹೇಳುತ್ತೀರಿ” ಶೀರ್ಷಿಕೆ ಕೊಟ್ಟಿದ್ದಾರೆ.
ಇದು ಗೊಂದಲ ಹುಟ್ಟಿಸುವಂತ ಪ್ರಶ್ನೆಯಾಗಿದೆ. ಅದು ಅಳಿಲುಗಳ ಕುರಿತಾಗಿ ಕೇಳಲಾಗಿದೆ. ಉತ್ತರ ಕೂಡಾ ಆಪ್ಷನ್ ಆಗಿ ಅಲ್ಲೇ ಕೊಟ್ಟಿದ್ದಾರೆ. ಆದರೆ ಯಾರಿಂದಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ನೆಟ್ಟಿಗರು ಸಹ ತಲೆ ಕೆಡಿಸಿಕೊಂಡು ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಈ ಪೋಸ್ಟ್ ಈಗಾಗಲೇ 139k ವೀಕ್ಷಣೆಗಳನ್ನ ಪಡೆದಿದೆ. ಭಾಗಶಃ ನೆಟ್ಟಿಗರು ಅಂದಾಜಿನಲ್ಲೇ ಉತ್ತರ ಹೇಳಿದ್ದಾರೆ. ಕೆಲವರು ಇದೆಂಥಾ ಪ್ರಶ್ನೆ ಎಂದು ಮರು ಪ್ರಶ್ನೆ ಮಾಡಿದ್ದಾರೆ.