ಭಾರತೀಯ ಅರಣ್ಯ ಸೇವೆಗಳ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಸಾಮಾಜಿಕ ಜಾಲತಾಣಗಳಲ್ಲಿ ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಸಾರ್ವಜನಿಕರಿಗೆ ಪ್ರಕೃತಿ ಪ್ರೇಮವನ್ನು ಕಲಿಸುವುದರ ಜೊತೆಗೆ ಅರಣ್ಯ ಹಾಗೂ ಕಾಡು ಪ್ರಾಣಿಗಳ ಸಂರಕ್ಷಣೆ ಎಷ್ಟು ಮುಖ್ಯ ಎಂಬುದರ ವಿವರಣೆ ನೀಡುತ್ತಿರುತ್ತಾರೆ.
ಈಗಾಗಲೇ ಅವರು ಇಂತಹ ಹಲವಾರು ವಿಡಿಯೋಗಳನ್ನು ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಅವರು ಮತ್ತೊಂದು ಅಪರೂಪದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅಳವಿನಂಚಿನಲ್ಲಿರುವ ಆಮೆಯನ್ನು ಗುರುತಿಸಬಹುದಾಗಿದೆ.
ಬಟಗೂರು ಬಸ್ಕ ಎಂಬ ಹೆಸರಿನ ಈ ಆಮೆ ಅಳಿವಿನ ಅಂಚಿನಲ್ಲಿರುವ ಜಾತಿಗಳಲ್ಲಿ ಒಂದಾಗಿದೆ. ಇದು ಕಾಂಬೋಡಿಯ, ಭಾರತದ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ, ಇಂಡೋನೇಷ್ಯಾ ಹಾಗೂ ಮಲೇಷ್ಯಾದಲ್ಲಿ ಕಂಡುಬರುತ್ತವೆ ಎನ್ನಲಾಗಿದ್ದು, ಮ್ಯಾನ್ಮಾರ್, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ನಲ್ಲಿ ಅಳಿವಿನಂಚಿನಲ್ಲಿವೆ.