ಹಲವಾರು ಸಾವಿರ ಕಿಲೋಮೀಟರ್‌ಗಳ ಪ್ರಯಾಣದ ನಂತರ, ವಲಸೆ ಹಕ್ಕಿಗಳು ಒಡಿಶಾದ ಚಿಲಿಕಾ ಆವೃತ ಪ್ರದೇಶಕ್ಕೆ ಬರಲು ಪ್ರಾರಂಭಿಸಿವೆ. ವನ್ಯಜೀವಿಗಳ ಮೋಡಿ ಮಾಡುವ ದೃಶ್ಯಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಭಾರತೀಯ ಅರಣ್ಯ ಅಧಿಕಾರಿ ಸುಸಾಂತ ನಂದಾ, ಚಿಲಿಕಾದ ಮೇಲೆ ವಲಸೆ ಬಂದಿರುವ ಹಕ್ಕಿಗಳ ಹಿಂಡು ಹಾರುವ ಮನಮೋಹಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ನೀಲಿ ಆಕಾಶದ ಕೆಳಗೆ ನೀರಿನ ಮೇಲೆ ಹಾರಾಡುತ್ತಿರುವ ಹಕ್ಕಿಗಳ ಸುಂದರ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ವಲಸೆ ಹಕ್ಕಿಗಳ ಗೂಡುಕಟ್ಟುವ ಕಾಲ ಪ್ರಾರಂಭವಾಗಿದೆ ಎಂದು ನಂದಾ ಉಲ್ಲೇಖಿಸಿದ್ದಾರೆ. ಸುಸಾಂತ ನಂದಾ ಅವರು ಟ್ವೀಟ್‌ನಲ್ಲಿ ಚಿಲಿಕಾ ಆವೃತವನ್ನು “ಅಲೆದಾಡುವ ಆತ್ಮದ ಸ್ವರ್ಗ” ಎಂದು ಬಣ್ಣಿಸಿದ್ದಾರೆ.
ಪಕ್ಷಿಗಳ ಹಿಂಡು ವಲಸೆ ಹೋಗುವ ವೀಡಿಯೊವನ್ನು ಸುಸಾಂತ ಹಂಚಿಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಅವರು ಫ್ಲೆಮಿಂಗೋ ಪಕ್ಷಿಗಳ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಭವ್ಯವಾದ ಫ್ಲೆಮಿಂಗೊಗಳು ಆಳವಿಲ್ಲದ ನೀರಿನ ಮೂಲಕ ಅಲೆದಾಡುವುದನ್ನು ಕಾಣಬಹುದಾಗಿದೆ. ರಮಣೀಯ ವಾತಾವರಣದ ಮಧ್ಯೆ ನೀರಿನಲ್ಲಿ ಪಕ್ಷಿಗಳು ಗುಂಪು ಗುಂಪಾಗಿ ಚಲಿಸುತ್ತಿರುವುದನ್ನು ಕಾಣಬಹುದಾಗಿದ್ದು, ನೆಟ್ಟಿಗರು ಈ ವಿಡಿಯೋ ಕಂಡ ಬೆರಗಾಗಿದ್ದರು.