ನವದೆಹಲಿ: ದ್ರವರೂಪದ ನ್ಯಾನೊ ಯೂರಿಯಾ ಪ್ಲಸ್ ಉತ್ಪಾದನೆ ಆರಂಭವಾಗಲಿದ್ದು, ಮೇ 1ರಿಂದ ಮಾರುಕಟ್ಟೆಯಲ್ಲಿ ರೈತರಿಗೆ ಲಭ್ಯವಿರುತ್ತದೆ.
ಇಪ್ಕೋ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ದ್ರವರೂಪದ ನ್ಯಾನೊ ಯೂರಿಯಾದಲ್ಲಿ ಶೇಕಡ 1ರಿಂದ 5ರಷ್ಟು ಸಾರಜನಕ ಅಂಶ ಇದೆ. ಇದರ ಸುಧಾರಿತ ಮಾದರಿಯಾದ ನ್ಯಾನೊ ಯೂರಿಯಾ ಪ್ಲಸ್ ನಲ್ಲಿ ಶೇಕಡ 16 ರಷ್ಟು ಸಾರಜನಕ ಅಂಶವಿದ್ದು, ಬೆಳೆಗಳಿಗೆ ನಿರ್ಣಾಯಕ ಹಂತದಲ್ಲಿ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ ಎಂದು ತಿಳಿಸಿದೆ.
ಇಪ್ಕೋಗೆ ಸೇರಿದ ಮೂರು ಘಟಕಗಳಲ್ಲಿ ನ್ಯಾನೊ ಯೂರಿಯಾ ಪ್ಲಸ್ ಉತ್ಪಾದನೆ ಆರಂಭಿಸಿ ಪ್ರತಿದಿನ ಎರಡು ಲಕ್ಷ ಬಾಟಲಿಗಳನ್ನು ಉತ್ಪಾದಿಸಲಾಗುವುದು ಎಂದು ಇಪ್ಕೋ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 2021 ರಲ್ಲಿ ನ್ಯಾನೊ ಯೂರಿಯಾ ತಯಾರಿಕೆಗೆ ಚಾಲನೆ ನೀಡಲಾಗಿದ್ದು, ಇದುವರೆಗೆ 2.5 ಕೋಟಿ ಬಾಟಲಿಗಳು ಮಾರಾಟವಾಗಿವೆ. 2023ರಲ್ಲಿ ನ್ಯಾನೊ ಡಿಎಪಿ ಉತ್ಪಾದನೆ ಆರಂಭಿಸಿದ್ದು, 45 ಲಕ್ಷ ಬಾಟಲಿ ಮಾರಾಟವಾಗಿವೆ.