ನೀವೇನಾದ್ರೂ ಬ್ಯಾಂಕ್ ಲಾಕರ್ ತೆಗೆದುಕೊಳ್ಳುವ ಯೋಚನೆಯಲ್ಲಿದ್ರೆ ಇದನ್ನೊಮ್ಮೆ ಓದಲೇಬೇಕು. ಬ್ಯಾಂಕ್ ಲಾಕರ್ ತೆಗೆದುಕೊಳ್ಳಲು ಬಹಳ ಖರ್ಚಾಗುತ್ತದೆ ಅನ್ನೋ ಭಾವನೆ ಬಹುತೇಕರಲ್ಲಿದೆ.
ಆದರೆ ವಾಸ್ತವ ಸ್ಥಿತಿಯೇ ಬೇರೆ. ಲಾಕರ್‌ಗೆ ಬ್ಯಾಂಕ್‌ಗಳು ವಿಧಿಸುವ ವೆಚ್ಚ ಅವುಗಳ ಗಾತ್ರವನ್ನು ಅವಲಂಬಿಸಿರುತ್ತದೆ.
ಹೆಚ್ಚಿನವರು ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ಅಗತ್ಯ ದಾಖಲೆಗಳನ್ನು ಭದ್ರತೆಯ ದೃಷ್ಟಿಯಿಂದ ಬ್ಯಾಂಕ್ ಲಾಕರ್‌ನಲ್ಲಿ ಇಡುತ್ತಾರೆ. ಈ ಸೇವೆಗಾಗಿ, ಲಾಕರ್ ಗಾತ್ರಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ. ಕೆಲವು ಬ್ಯಾಂಕ್‌ಗಳು ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಆಧಾರದ ಮೇಲೆ ಗ್ರಾಹಕರಿಗೆ ಲಾಕರ್ ಗಳನ್ನು ನೀಡುತ್ತವೆ.
ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಲಾಕರ್‌ಗಳ ಶುಲ್ಕ ಬೇರೆ ಬೇರೆ ತೆರನಾಗಿದೆ. ಗಾತ್ರ ಮತ್ತು ನಗರವನ್ನು ಕೂಡ ಇದು ಅವಲಂಬಿಸಿರುತ್ತದೆ.