ನವದೆಹಲಿ: ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಚೊಚ್ಚಲ ಪಂದ್ಯವು ಅವರ ಕುಂಟುತ್ತಿರುವ ವೃತ್ತಿಜೀವನದ ಮೆಟ್ಟಿಲು ಎಂದೇ ಭಾವಿಸಲಾಗುತ್ತದೆ. ಮೂರು ವರ್ಷಗಳಿಗೂ ಹೆಚ್ಚು ಕಾಲ ಅವರನ್ನು ಕಾಡಿದ ಗಾಯದಿಂದ ಅವರು ಮರಳಿ ಹೊಸ ಚೈತನ್ಯ ಪಡೆದಿದ್ದಾರೆ.
ಅವರಿಗೆ ಇದು ಸುಲಭವಾಗಿರಲಿಲ್ಲ. ಆದರೂ ಅವರ ಆತ್ಮವಿಶ್ವಾಸವು ಗುಜರಾತ್ ಟೈಟಾನ್ಸ್ ಅನ್ನು ಚೊಚ್ಚಲ ಋತುವಿನಲ್ಲಿ ಪ್ರಶಸ್ತಿ ಗೆಲುವಿಗೆ ಕಾರಣವಾಯಿತು. ತಂಡದ ಅತ್ಯಧಿಕ ಸ್ಕೋರರ್ ಆಗಿ ಕೊನೆಗೊಳ್ಳುವ ಮೂಲಕ ಅವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ತಾವು ತಂಡದ ನಾಯಕತ್ವ ವಹಿಸಿಕೊಳ್ಳಲು ನೆರವಾದದ್ದೇನು ಎನ್ನುವುದನ್ನು ಹಾರ್ದಿಕ್ ಅವರು ನೆನಪಿಸಿಕೊಂಡಿದ್ದಾರೆ. ತಂಡದ ಕೋಚ್ ಆಗಿದ್ದ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಅವರ ಕರೆ ತನ್ನ ಮನಸ್ಸನ್ನು ಹೇಗೆ ಬದಲಾಯಿಸಿತು ಎಂಬುದನ್ನು ಹೇಳಿದ್ದಾರೆ.
ಅವರು ಹುರಿದುಂಬಿಸದಿದ್ದರೆ ನನ್ನಿಂದ ಇದು ಸಾಧ್ಯವಾಗುತ್ತಿರಲಿಲ್ಲ. ‘ನೀವು ಸಿದ್ಧರಿದ್ದರೆ, ನೀವು ನಾಯಕತ್ವವನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ’ ಎಂಬ ಅವರ ಮಾತಿನಿಂದ ನಾನು ಪ್ರೇರೇಪಿತನಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು. ಅವರು ಕಳಿಸಿದ ಈ ಒಂದು ಸಂದೇಶದಿಂದ ಎಲ್ಲವೂ ಸಾಧ್ಯವಾಯಿತು ಎಂದಿದ್ದಾರೆ ಹಾರ್ದಿಕ್.