ದಿನವಿಡೀ ಪೋನ್ ಬಳಸುವುದರಿಂದ ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗುತ್ತದೆ. ಆಗ ಅದು ನೋಡಲು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ಮತ್ತು ಇದರಿಂದ ಫೋನ್ ಸ್ಕ್ರೀನ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಅದು ನಿಮ್ಮ ಆರೋಗ್ಯವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ಫೋನ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸಲು ಈ ವಿಧಾನ ಅನುಸರಿಸಿ.
ಫೋನ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುವಾಗ ಪರದೆಯ ಮೇಲಿನಿಂದ ಕೆಳಗೆ ಅಥವಾ ಕೆಳಗಿನಿಂದ ಮೇಲಕ್ಕೆ ಒರೆಸಬೇಡಿ, ಇದರಿಂದ ಅದು ಸ್ವಚ್ಛವಾಗುವುದಿಲ್ಲ. ಬದಲಾಗಿ ಮೃದುವಾದ ಬಟ್ಟೆಯಲ್ಲಿ ತುಂಬಾ ಒತ್ತಡ ಹಾಕದೆ ವೃತ್ತಾಕಾರದ ಚಲನೆಯಲ್ಲಿ ಸ್ಕ್ರೀನ್ ಒರೆಸಿದರೆ ಅದು ಸ್ವಚ್ಛವಾಗುತ್ತದೆ.
ಹಾಗೇ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ಲೀನಿಂಗ್ ಲಿಕ್ವಿಡ್ ಅನ್ನು ಬಳಸಿ ಸ್ವಚ್ಛಗೊಳಿಸಬಹುದು. ಕ್ಲೀನಿಂಗ್ ಲಿಕ್ವಿಡ್ ಅನ್ನು ಬಟ್ಟೆಯಲ್ಲಿ 2 ಹನಿ ಹಾಕಿ ಫೋನ್ ಸ್ಕ್ರೀನ್ ಮೇಲೆ ಉಜ್ಜಿದರೆ ಸ್ವಚ್ಛವಾಗುತ್ತದೆ.
ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಅಥವಾ ಮೈಕ್ರೋ ಫೆಬ್ರಿಕ್ ಬಟ್ಟೆಯನ್ನು ಬಳಸಬಹುದು. ಇದು ಫೋನ್ ಸ್ಕ್ರೀನ್ ನಲ್ಲಿರುವ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಾಣುಗಳನ್ನು ಸ್ವಚ್ಛಗೊಳಿಸುತ್ತದೆ.
ಫೋನ್ ಸ್ಕ್ರೀನ್ ಗಳ ಮೇಲೆ ತುಂಬಾ ಗೀರುಗಳಿದ್ದರೆ ಆಗ ಟೂತ್ ಪೇಸ್ಟ್ ಅನ್ನು ಬಳಸಿ. ಸ್ಕ್ರೀನ್ ಮೇಲೆ ಸ್ವಲ್ಪ ಟೂತ್ ಪೇಸ್ಟ್ ಹಾಕಿ ನಿಧಾನವಾಗಿ ಉಜ್ಜಿ ಬಟ್ಟೆಯಿಂದ ಸ್ವಚ್ಛಗೊಳಿಸಿ ಇದರಿಂದ ಫೋನ್ ಸ್ಕ್ರೀನ್ ಹೊಳೆಯುತ್ತದೆ.