alex Certify ನಿಮ್ಮ ಮಗು ಬೇಗ ನಿದ್ರೆಗೆ ಜಾರಬೇಕೆಂದರೆ ಪ್ರತಿದಿನ ಈ ಮೂರು ಆಹಾರ ತಪ್ಪದೇ ನೀಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮಗು ಬೇಗ ನಿದ್ರೆಗೆ ಜಾರಬೇಕೆಂದರೆ ಪ್ರತಿದಿನ ಈ ಮೂರು ಆಹಾರ ತಪ್ಪದೇ ನೀಡಿ

ಮಕ್ಕಳಿಗೆ ನಿದ್ರೆ ಮಾಡಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಯಾಕೆಂದರೆ ಮಕ್ಕಳು ಸರಿಯಾದ ಸಮಯಕ್ಕೆ ಮಲಗುವುದಿಲ್ಲ. ಇದರಿಂದ ಪೋಷಕರು ಎಷ್ಟೇ ತೊಟ್ಟಿಲು ತೂಗಿ, ಹಾಡು ಹೇಳಿ ಮಲಗಿಸಿದರೂ ಅವರಿಗೆ ನಿದ್ರೆಯೇ ಬರುವುದಿಲ್ಲ. ಮಕ್ಕಳು ಆಟವಾಡುವುದರಲ್ಲೇ ಮಗ್ನರಾಗಿರುತ್ತಾರೆ. ಇದರಿಂದ ಪೋಷಕರು ನಿದ್ರೆ ಮಾಡಲು ಆಗದೆ ಒದ್ದಾಡುವಂತಾಗುತ್ತದೆ. ನಿಮ್ಮ ಮಗು ಬೇಗನೆ ಮಲಗಬೇಕೆಂದರೆ ನೀವು ಪ್ರತಿದಿನ ಈ ಮೂರು ಆಹಾರವನ್ನು ತಪ್ಪದೇ ನೀಡಿ. ಇದು ಮಗುವಿನ ಆರೋಗ್ಯಕ್ಕೂ ಉತ್ತಮ ಮತ್ತು ಮಗು ಬೇಗನೆ ನಿದ್ರೆಗೆ ಜಾರುತ್ತದೆ.

*ಬಾಳೆಹಣ್ಣು : ಬಾಳೆಹಣ್ಣುಗಳಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದು ಸ್ನಾಯು ವಿಶ್ರಾಂತಿಗೆ ಮತ್ತು ಉತ್ತಮ ನಿದ್ರೆಯ ಗುಣಮಟ್ಟವನ್ನು ಉತ್ತೇಜಿಸುವ ಎರಡು ಪ್ರಮುಖ ಖನಿಜಗಳಾಗಿವೆ. ಹೆಚ್ಚುವರಿಯಾಗಿ, ಬಾಳೆಹಣ್ಣಿನಲ್ಲಿ ವಿಟಮಿನ್ ಬಿ 6 ಇದೆ, ಇದು ನಿದ್ರೆಯನ್ನು ನಿಯಂತ್ರಿಸುವ ಟ್ರಿಪ್ಟೋಫಾನ್ ಅನ್ನು ಸಿರೊಟೋನಿನ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಮಗು ಬೇಗನೆ ನಿದ್ರೆಗೆ ಜಾರುತ್ತದೆ. ಹಾಗಾಗಿ ಪ್ರತಿದಿನ ಮಗುವಿಗೆ ಬಾಳೆಹಣ್ಣು ತಿನ್ನಿಸಿ.

*ಓಟ್ಸ್ : ಓಟ್ಸ್ ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ನ ಉತ್ತಮ ಮೂಲವಾಗಿದೆ, ಇದರಿಂದ ನಿಮ್ಮ ಮಗುವಿಗೆ ರಾತ್ರಿಯಿಡೀ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಮತ್ತು ಇವು ದೇಹ ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ. ಈ ಹಾರ್ಮೋನ್ ನಿದ್ರೆಯ ಮಟ್ಟವನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ಮಗು ಚೆನ್ನಾಗಿ ನಿದ್ರೆ ಮಾಡುತ್ತದೆ. ಹಾಗಾಗಿ ಇದನ್ನು ಹಾಲಿನ ಜೊತೆ ಮಗುವಿಗೆ ತಿನ್ನಿಸಿ.

*ಚೆರ್ರಿ : ಚೆರ್ರಿಗಳು, ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಗೆ ಸಹಕಾರಿಯಾಗಿದೆ. ಮಲಗುವ ಮೊದಲು ಚೆರ್ರಿ ಹಣ್ಣಿನ ರಸವನ್ನು ಸೇವಿಸುವುದರಿಂದ ನಿದ್ರೆಯ ಅವಧಿ ಮತ್ತು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತದೆ. ಇದನ್ನು ನಿಮ್ಮ ಮಗುವಿಗೆ ಪ್ರತಿದಿನ ತಿನ್ನಿಸಿದರೆ ಮಗು ಚೆನ್ನಾಗಿ ನಿದ್ರೆ ಮಾಡುತ್ತದೆ.

ನಿಮ್ಮ ಮಗುವಿನ ಆಹಾರದಲ್ಲಿ ಇವುಗಳನ್ನು ಸೇರಿಸುವ ಮೂಲಕ ಅವರಿಗೆ ವೇಗವಾಗಿ ನಿದ್ರೆ ಮಾಡಲು ಮತ್ತು ಹೆಚ್ಚು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಅವರು ರಾತ್ರಿ ಸುಖವಾಗಿ ನಿದ್ರೆ ಮಾಡುತ್ತಾರೆ ಮತ್ತು ಇದು ಒಟ್ಟಾರೆ ಆರೋಗ್ಯಕ್ಕೂ ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...